ಚಂಡೀಗಡ:ಹರಿಯಾಣದ ಮುಖ್ಯಮಂತ್ರಿಯಾಗಿ ಮನೋಹರ್ ಲಾಲ್ ಖಟ್ಟರ್ ಹಾಗೂ ಉಪಮುಖ್ಯಮಂತ್ರಿಯಾಗಿ ದುಶ್ಯಂತ್ ಚೌಟಾಲ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಇಲ್ಲಿನ ರಾಜಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಸತ್ಯದೇವ್ ನಾರಾಯಣ ಆರ್ಯ ಪ್ರಮಾಣವಚನ ಬೋಧಿಸಿದರು.

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷವೂ ಸ್ಪಷ್ಟ ಸರಳ ಬಹುಮತ ಗಳಿಸಲು ವಿಫಲವಾಗಿದ್ದವು. ಹೀಗಾಗಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಪ್ರಾದೇಶಿಕ ಪಕ್ಷ ಜೆಜೆಪಿ ಜೊತೆ ಸೇರಿ ಕಡೆಗೂ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಮೂಲಕ ಮನೋಹರ್ ಲಾಲ್ ಖಟ್ಟರ್ 2.0 ಸರ್ಕಾರ ಮತ್ತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಚುನಾವಣೆಯಲ್ಲಿ 10 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದ್ದ ಜನ ನಾಯಕ ಜನತಾ ಪಾರ್ಟಿ, ಬಿಜೆಪಿಗೆ ಬೆಂಬಲ ನೀಡಿದೆ. ಜೆಜೆಪಿ ಮುಖ್ಯಸ್ಥ ದುಷ್ಯಂತ್ ಚೌಟಾಲ, ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 40, ಕಾಂಗ್ರೆಸ್ 31 ಹಾಗೂ ಜೆಜೆಪಿ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಸ್ಪಷ್ಟ ಬಹುಮತ ಯಾವೊಂದೂ ಪಕ್ಷಕ್ಕೂ ಲಭಿಸದ ಕಾರಣ ಬಿಜೆಪಿ ಜೊತೆಗೆ ಜೆಜೆಪಿ ಮೈತ್ರಿಗೆ ಒಪ್ಪಿಕೊಂಡಿತು. ಅಧಿಕಾರ ಪಡೆಯಲು ಮ್ಯಾಜಿಕ್ ನಂಬರ್ 46 ಪಡೆಯಲು ಹರಿಯಾಣದಲ್ಲಿ ಈ ಮೈತ್ರಿ ಮೂಲಕ ಬಿಜೆಪಿಗೆ 50 ಸ್ಥಾನ ಲಭಿಸಿದಂತಾಗಿದೆ.