ನವದೆಹಲಿ : ಕೇದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಬಿಜೆಪಿ ಮಿತ್ರ ಪಕ್ಷವಾದ ಜನನಾಯಕ ಜನತಾ ಪಕ್ಷದ ಕರ್ನಾಲ್ ಜಿಲ್ಲಾಧ್ಯಕ್ಷ ಇಂದರ್ಜಿತ್ ಸಿಂಗ್ ಗೋರಾಯ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಹರಿಯಾಣದಲ್ಲಿ ಬಿಜೆಪಿ ಮತ್ತು ಜೆಜೆಪಿ ಮಿತ್ರಪಕ್ಷವಾಗಿ ಆಡಳಿತ ನಡೆಸುತ್ತಿವೆ. ರೈತರು ಕಳೆದ 70 ದಿನಗಳಿಂದ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ, ನಾನು ಕೂಡ ಮೊದಲು ರೈತನಾಗಿದ್ದೆ, ಈಗ ರಾಜಕಾರಣಿಯಾಗಿದ್ದೇನೆ. ಇಂತಹ ಸಂದರ್ಭದಲ್ಲಿ ರೈತರ ಹಿತಚಿಂತನೆ, ಕ್ಷೇಮಾಭ್ಯುದಯವನ್ನು ಖಾತರಿ ಪಡಿಸಲು ವಿಫಲವಾದ ಪಕ್ಷದಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅವರು ಹೇಳಿದ್ದಾರೆ.