ಚಂಡೀಗಢ (ಹರಿಯಾಣ): ಉತ್ತರಾಖಂಡದ ಚಮೋಲಿಯಲ್ಲಿ ಉಂಟಾದ ಹಿಮಪ್ರವಾಹದ ಸಂತ್ರಸ್ತರಿಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸಹಾಯ ಮಾಡಲು ಮುಂದಾಗಿದ್ದಾರೆ.
ಚಮೋಲಿ ದುರಂತ: 11 ಕೋಟಿ ಪರಿಹಾರ ಘೋಷಿಸಿದ ಹರಿಯಾಣ ಸಿಎಂ - ಚಮೋಲಿಯಲ್ಲಿ ಹಿಮಪ್ರವಾಹ
ಚಮೋಲಿಯಲ್ಲಿ ಉಂಟಾದ ಹಿಮಪ್ರವಾಹದ ಸಂತ್ರಸ್ತರಿಗೆ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 11 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಹರಿಯಾಣ ಸರ್ಕಾರದಿಂದ ಉತ್ತರಾಖಂಡಕ್ಕೆ ಸಾಧ್ಯವಿರುವ ಎಲ್ಲ ಸಹಾಯ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
khatter
ಸಿಎಂ ಮನೋಹರ್ ಲಾಲ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 11 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದು, ಇದರೊಂದಿಗೆ ಹರಿಯಾಣ ಸರ್ಕಾರದಿಂದ ಉತ್ತರಾಖಂಡಕ್ಕೆ ಸಾಧ್ಯವಿರುವ ಎಲ್ಲ ಸಹಾಯ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
"ದೇವಭೂಮಿ ಉತ್ತರಾಖಂಡದಲ್ಲಿ ಹಿಮನದಿ ಒಡೆದಿರುವುದರಿಂದ ಉಂಟಾದ ಅನಾಹುತವು ಅನೇಕರ ಜೀವನದ ಮೇಲೆ ಪರಿಣಾಮ ಬೀರಿದೆ. ಈ ನೈಸರ್ಗಿಕ ವಿಕೋಪದಿಂದ ಉಂಟಾಗುವ ಸಂದರ್ಭಗಳನ್ನು ಎದುರಿಸಲು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 11 ಕೋಟಿ ರೂ. ನೀಡಲಾಗುವುದು" ಎಂದು ಅವರು ಟ್ವೀಟ್ ಮಾಡಿದ್ದಾರೆ.