ಫರೀದಾಬಾದ್: ಹರಿಯಾಣ ಕಾಂಗ್ರೆಸ್ ವಕ್ತಾರ ವಿಕಾಸ್ ಚೌಧರಿಯನ್ನು ದೆಹಲಿ ಸಮೀಪದ ಫರೀದಬಾದ್ನಲ್ಲಿ ಅಪರಿಚಿತರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಇಂದು ಮುಂಜಾನೆ ವಿಕಾಸ್ ಚೌಧರಿ ಜಿಮ್ ಮುಗಿಸಿ ಹೊರಬರುತ್ತಿದ್ದ ವೇಳೆ ಆಗಂತುಕರು ಗುಂಡಿನ ದಾಳಿ ನಡೆಸಿದ್ದಾರೆ. ಆಗಂತುಕರು ಮಾರುತಿ ಸುಜುಕಿ ಎಸ್ಎಕ್ಸ್4 ಕಾರಿನಲ್ಲಿ ಆಗಮಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.