ಕರ್ನಾಟಕ

karnataka

LIVE: ಹರಿಯಾಣ ಚುನಾವಣಾ ಫಲಿತಾಂಶ: ಬಿಜೆಪಿ-ಕಾಂಗ್ರೆಸ್​ಗೆ ದಕ್ಕದ ಬಹುಮತ, ಜೆಜೆಪಿ ಕಿಂಗ್​ಮೇಕರ್​!

By

Published : Oct 24, 2019, 11:58 AM IST

Updated : Oct 24, 2019, 7:47 PM IST

ಹರಿಯಾಣ ವಿಧಾನಸಭಾ ಚುನಾವಣೆ-2019

18:04 October 24

ಹರಿಯಾಣ: ಗೆಲುವು-ಮುನ್ನಡೆ ಹೀಗಿದೆ

ಭೂಪಿಂದರ್ ಸಿಂಗ್​ ಹೂಡಾ ಪ್ರತಿಕ್ರಿಯೆ
ಪಕ್ಷ ಮುನ್ನಡೆ ಗೆಲುವು ಗಳಿಕೆ ಅಥವಾ ಇಳಿಕೆ
ಬಿಜೆಪಿ 00 40 -7
ಕಾಂಗ್ರೆಸ್  00 31 16
ಐಎನ್​ಎಲ್​ಡಿ 00 01 -19
ಜೆಜೆಪಿ 00 10 +10
ಇತರ 00 08 +2
ಒಟ್ಟು 00 90

18:03 October 24

ರಾಜ್ಯಪಾಲರನ್ನು ಭೇಟೆ ಮಾಡಲಿರುವ ಹರಿಯಾಣ ಸಿಎಂ ಖಟ್ಟರ್

  • ಹರಿಯಾಣದ ಹಾಲಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಮನೋಹರ್ ಲಾಲ್ ಖಟ್ಟರ್, ಇಂದು ಸಂಜೆ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರನ್ನು ಭೇಟಿ ಮಾಡಲಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆ ಬಗ್ಗೆ ರಾಜ್ಯಪಾಲರಲ್ಲಿ ಮಾತನಾಡಲಿದ್ದಾರೆ.

18:03 October 24

ಬಿಜೆಪಿ ನಾಯಕ ಅನಿಲ್​ ವಿಜ್​ಗೆ ಜಯ​

  • ಅಂಬಾಲಾ ಕಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಿರೋ ಹರಿಯಾಣದ ಹಾಲಿ ಮಂತ್ರಿ ಹಾಗೂ ಬಿಜೆಪಿ ನಾಯಕ ಅನಿಲ್​ ವಿಜ್​ ಜಯಗಳಿಸಿದ್ದಾರೆ. 

17:02 October 24

ದುಶ್ಯಂತ್ ಚೌತಲಾ ಮುಂದಿನ ಮುಖ್ಯಮಂತ್ರಿ: ಮಾಜಿ ಕಾಂಗ್ರೆಸ್​ ಅಧ್ಯಕ್ಷ

  • ಜೆಜೆಪಿ ನಾಯಕ ದುಶ್ಯಂತ್ ಚೌಟಾಲ, ಹರಿಯಾಣದ ಮುಂದಿನ ಮುಂಖ್ಯಮಂತ್ರಿ ಎಂದ ರಾಜ್ಯ ಮಾಜಿ ಕಾಂಗ್ರೆಸ್​ ಅಧ್ಯಕ್ಷ ಅಶೋಕ್​ ತನ್ವಾರ್​

16:46 October 24

ಗರ್ಹಿ ಸಂಪ್ಲಾ ಕಿಲೋಯಿ ಕ್ಷೇತ್ರದಿಂದ ಕಾಂಗ್ರೆಸ್​ ನಾಯಕ ಬಿಎಸ್​ ಹೂಡಾ ಗೆಲುವು

  • ಪ್ರಜೆಗಳ ಆದೇಶ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧವಿದೆ.
  • ಎಲ್ಲಾ ಪಕ್ಷಗಳು ರಾಜ್ಯದಲ್ಲಿ ಬಲಿಷ್ಟ ಸರ್ಕಾರ ರಚಿಸಲು ಮುಂದೆ ಬರಬೇಕು.
  • ಜೆಜೆಪಿ, ಬಿಎಸ್​ಪಿ, ಐಎನ್​ಎಲ್​ಡಿ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳು ಸರ್ಕಾರ ರಚನೆಗೆ ಮುಂದೆ ಬರಬೇಕಿದೆ.
  • ಹಿರಿಯ ಕಾಂಗ್ರೆಸ್​ ನಾಯಕ ಹಾಗೂ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್​ ಹೂಡಾ ಪ್ರತಿಕ್ರಿಯೆ
  • ಗರ್ಹಿ ಸಂಪ್ಲಾ ಕಿಲೋಯಿ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿರುವ ಬಿಎಸ್​ ಹೂಡಾ

16:31 October 24

ರಾಜ್ಯ ಬದಲಾವಣೆಯನ್ನು ಬಯಸುತ್ತಿದೆ: ಜೆಜೆಪಿ ನಾಯಕ ದುಶ್ಯಂತ್ ಚೌತಲಾ

  • ಮತಎಣಿಕೆ ಕಾರ್ಯ ನಡೆಯುತ್ತಿದೆ. ಗೆಲುವು ನಮ್ಮದಾದ ತಕ್ಷಣ ನಾನು ಎಲ್ಲರೊಂದಿಗೆ ಚರ್ಚಿಸುತ್ತೇನೆ. 
  • ನಾಳೆ ಶಾಸಕರೊಂದಿಗೆ ಸಭೆ ನಡೆಸಿ ಭವಿಷ್ಯದ ಕ್ರಮವನ್ನು ನಿರ್ಧರಿಸುತ್ತೇನೆ.
  • ರಾಜ್ಯ ಬದಲಾವಣೆಯನ್ನು ಬಯಸುತ್ತಿದೆ. ಹೀಗಾಗಿ ಜೆಜೆಪಿ ಅದನ್ನು ತರುತ್ತದೆ.
  • ಜೆಜೆಪಿ ನಾಯಕ ದುಶ್ಯಂತ್ ಚೌತಲಾ ಪ್ರತಿಕ್ರಿಯೆ

16:12 October 24

ಬಿಜೆಪಿ ನಾಯಕ ಓಂಪ್ರಕಾಶ್​ ಧಂಕಾರ್​ಗೆ ಸೋಲು

  • ಬಾದ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಓಂಪ್ರಕಾಶ್​ ಧಂಕಾರ್​ ಸೋಲೊಪ್ಪಿಕೊಂಡಿದ್ದಾರೆ.
  • ಕಾಂಗ್ರೆಸ್ ಅಭ್ಯರ್ಥಿ ಕುಲ್ದೀಪ್​ ವಿರುದ್ಧ 9266 ಮತಗಳ ಅಂತರದಲ್ಲಿ ಸೋತ ಓಂಪ್ರಕಾಶ್
  • ಐಎನ್​ಎಲ್​ಡಿ ನಾಯಕ ಅಭಯ್​ ಚೌಟಾಲ ಎಲ್ಲೆನಾಬಾದ್ ಕ್ಷೇತ್ರದಲ್ಲಿ ಜಯ

15:06 October 24

ಮುನ್ನಡೆಯಲ್ಲಿ ಹಾಲಿ ಮುಖ್ಯಮಂತ್ರಿ

  • ಕರ್ನಲ್​ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಹರಿಯಾಣ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಮನೋಹರ್​ ಲಾಲ್​ ಖತ್ತರ್​ 41,950 ಮತಗಳ ಅಂತರ ಕಾಯ್ದುಕೊಂಡಿದ್ದಾರೆ.
  • ಕಾಂಗ್ರೆಸ್​ನ ತಾರ್ಲೋಚನ್ ಸಿಂಗ್ ಹಿನ್ನಡೆ ಅನುಭವಿಸಿದ್ದಾರೆ.

15:02 October 24

ಜೆಜೆಪಿ ಮುಖಂಡ ದುಶ್ಯಂತ್ ಚೌಟಾಲ ದಿಗ್ವಿಜಯ

  • ಜೆಜೆಪಿ ಮುಖಂಡ ದುಶ್ಯಂತ್ ಚೌಟಾಲ 30,000 ಮತಗಳಿಂದ ಜಯಗಳಿಸಿದ್ದಾರೆ.
  • ಟಿಕ್​ ಟಾಕ್​ನಲ್ಲಿ ಸೆನ್ಸೇಶನ್​ ಸೃಷ್ಟಿಸಿದ್ದ ಸೊನಾಲಿ ಫೋಗತ್​ ಆದಂಪುರ್​ ಕ್ಷೇತ್ರದಲ್ಲಿ ಸೋಲೊಪ್ಪಿಕೊಂಡಿದ್ದಾರೆ.
  • ಶಹಬಾದ್​ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಚಿವ ಕೃಷ್ಣನ್​ ಕುಮಾರ್​ ಬೇಡಿ ಪರಾಭವಗೊಂಡಿದ್ದಾರೆ. ಜೆಜೆಪಿ ಅಭ್ಯರ್ಥಿ ರಾಮ್​ ಕರಣ್​ ವಿರುದ್ಧ 37,127 ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ.

14:12 October 24

ಬನ್ನಿ, ನಾವು ಸಮ್ಮಿಶ್ರ ಸರ್ಕಾರವನ್ನು ರಚಿಸೋಣ: ಕಾಂಗ್ರೆಸ್​ ನಾಯಕ ಡಿಎಸ್​ ಹೂಡಾ

  • ಜನರು ಮನೋಹರ್​ ಲಾಲ್​ ಖತ್ತರ್​ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಿತ್ತೆಸೆದಿದ್ದಾರೆ.
  • ಜೆಜೆಪಿ ನಾಯಕ ದುಶ್ಯಂತ್ ​ಚೌಟಾಲ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳಿಗೆ ನಾನು ಹೇಳಲಿಚ್ಛಿಸುತ್ತೇನೆ
  • ನಾವು ಸಮ್ಮಿಶ್ರ ಸರ್ಕಾರವನ್ನು ರಚಿಸೋಣ
  • ಈ ಮೂಲಕ ಮತದಾರ ಪ್ರಭುಗಳ ತೀರ್ಮಾನವನ್ನು ಗೌರವಿಸೋಣ
  • ಕಾಂಗ್ರೆಸ್​ ನಾಯಕ ಡಿಎಸ್​ ಹೂಡಾ ಹೇಳಿಕೆ

13:48 October 24

ಕಾಂಗ್ರೆಸ್​ಗೆ ಸರ್ಕಾರ ರಚಿಸುವ ಸಂದರ್ಭ ಬಂದಿದೆ : ಬಿ ಎಸ್​ ಹೂಡಾ

  • ಕಾಂಗ್ರೆಸ್​ಗೆ ಸರ್ಕಾರ ರಚಿಸುವ ಸಂದರ್ಭ ಬಂದಿದೆ
  • ಜೆಜೆಪಿ, ಐಎನ್​ಎಲ್​ಡಿ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳು ಒಗ್ಗೂಡಿ ಬಲಿಷ್ಟ ಸರ್ಕಾರ ರಚಿಸುವ ಕಾಲ ಸನ್ನಿಹಿತವಾಗಿದೆ 
  • ಪ್ರತಿಯೊಬ್ಬರಿಗೂ ಗೌರವಯುತವಾದ ಸ್ಥಾನ ನೀಡುತ್ತೇವೆಂದು ನಾನು ಭರವಸೆ ನೀಡುತ್ತೇನೆ. 
  • ರೋಹ್ಟಕ್​ನಲ್ಲಿ ಮಾತನಾಡಿದ ಹರಿಯಾಣ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್​ ನಾಯಕ ಭೂಪಿಂದರ್ ಸಿಂಗ್​ ಹೂಡಾ

13:39 October 24

ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ರಾಜೀನಾಮೆ!

ಸುಭಾಷ್​ ಬರಾಲಾ
  • ತೊಹಾನಾ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿನ ಭೀತಿಯಲ್ಲಿರುವ ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್​ ಬರಾಲಾ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
  • ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ
  • ಸದ್ಯದ ಚಿತ್ರಣ ನೋಡಿದರೆ ಮ್ಯಾಜಿಕ್​ ಸಂಖ್ಯೆಯನ್ನು ಬಿಜೆಪಿ ದಾಟುವಂತೆ ಕಾಣುತ್ತಿಲ್ಲ
  • ಬಹುಮತ ಗಳಿಸಲು ಕೇಸರಿ ಪಡೆ ಒದ್ದಾಡುತ್ತಿದೆ ಎಂದ ಸುಭಾಷ್​ ಬರಾಲಾ

13:20 October 24

ಹರಿಯಾಣ ಹಣಕಾಸು ಸಚಿವ ಪ್ರತಿಕ್ರಿಯೆ

  • ಮತದಾರ ಪ್ರಭುವಿನ ಆದೇಶ ಜೆಜೆಪಿ ಪರ ಇರುವಂತಿದೆ
  • ಜನರ ಅಭಿಪ್ರಾಯಕ್ಕೆ ನಾವು ತಲೆಬಾಗಲೇ ಬೇಕು
  • ಹರಿಯಾಣ ಹಣಕಾಸು ಸಚಿವ ಕ್ಯಾಪ್ಟನ್​ ಅಭಿಮನ್ಯು ಅಭಿಪ್ರಾಯ
  • ಹರಿಯಾಣದ ಹಿಸಾರ್​ ಜಿಲ್ಲೆಯ ನಾರ್ನೌಂಡ್​ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್​ ಅಭಿಮನ್ಯು

13:08 October 24

ಕಾಂಗ್ರೆಸ್ ನಾಯಕ ಮಮ್ಮನ್​ ಖಾನ್​ಗೆ ಗೆಲುವು

  • ಕಾಂಗ್ರೆಸ್ ನಾಯಕ ಮಮ್ಮನ್​ ಖಾನ್,​ ಫಿರೋಜ್ಪುರ್​ ಜಿರ್ಕಾ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದಾರೆ.
  • ಮಮ್ಮನ್​ ಖಾನ್ ಬಿಜೆಪಿಯ ನಸೀಮ್​ ಅಹ್ಮದ್​ರನ್ನು ಸೋಲಿಸಿದ್ದಾರೆ.

12:55 October 24

ಬಿಜೆಪಿ ಅಭ್ಯರ್ಥಿ ಕವಿತಾ ಜೈನ್​ಗೆ ಸೋಲು

ಹರಿಯಾದ ಮಂತ್ರಿ ಹಾಗೂ ಸೋನಿಪತ್​ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕವಿತಾ ಜೈನ್​ ಸೋಲೊಪ್ಪಿಕೊಂಡಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಸುರೇಂದ್ರ ಪನ್ವಾರ್​ ವಿರುದ್ಧ ಕವಿತಾ ಜೈನ್ ಮುಗ್ಗರಿಸಿದ್ದಾರೆ.

12:50 October 24

ಯೋಗೇಶ್ವರ್​ ದತ್​ಗೆ ಹಿನ್ನಡೆ

ಬರೋಡ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರೋ ಭಾರತದ ಖ್ಯಾತ ಕುಸ್ತಿಪಟು ಯೋಗೇಶ್ವರ್​ ದತ್​ಗೆ 3590 ಮತಗಳ ಹಿನ್ನಡೆ

12:38 October 24

ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವ ಹರಿಯಾಣ ಮಾಜಿ ಮುಖ್ಯಮಂತ್ರಿ

ಒಟ್ಟು11 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಪಕ್ಷದ ಕಾರ್ಯಕರ್ತರು ಜಿಂದ್​ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. 

12:37 October 24

ಜೆಜೆಪಿ ಕಾರ್ಯಕರ್ತರ ಸಂಭ್ರಮ

ಜೆಜೆಪಿ ಕಾರ್ಯಕರ್ತರ ಸಂಭ್ರಮ

ಹರಿಯಾಣದ ದಾದ್ರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರೋ  ಬಿಜೆಪಿಯ ಬಬಿತಾ ಫೋಗತ್, 2387 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

12:17 October 24

ದಾದ್ರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಬಿತಾ ಫೋಗತ್ ಮುನ್ನಡೆ

ಕಾಂಗ್ರೆಸ್ ಸಿಎಂ ಸ್ಥಾನ ನೀಡುತ್ತದೆ ಎಂಬ ಮಾತಿನ ಬಗ್ಗೆ ಜೆಜೆಪಿ(ಜನ್​ನಾಯಕ್ ಜನತಾ ಪಕ್ಷ) ಮುಖ್ಯಸ್ಥ ದುಶ್ಯಂತ್ ಚೌಟ್ಹಾಲ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಈ ಬಗ್ಗೆ ಯಾರೊಂದಿಗೂ ಯಾವುದೇ ಚರ್ಚೆ ನಡೆಸಿಲ್ಲ. ಅಂತಿಮ ಫಲಿತಾಂಶ ಬಂದ ಬಳಿಕವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

12:13 October 24

ಜೆಜೆಪಿ ಮುಖ್ಯಸ್ಥ ದುಶ್ಯಂತ್ ಚೌಟ್ಹಾಲ ಪ್ರತಿಕ್ರಿಯೆ

  • ಹಿರಿಯ ಬಿಜೆಪಿ ನಾಯಕ ಅನಿಲ್​ ವಿಜ್​ಗೆ ​ 3,569 ಮತಗಳ ಮುನ್ನಡೆ
  • ಹರಿಯಾಣದಲ್ಲಿ ಮ್ಯಾಜಿಕ್​ ನಂಬರ್​ 46
  • ಬಿಜೆಪಿ ಮತ್ತು ಕಾಂಗ್ರೆಸ್​​ ನಡುವೆ ನೇರ ಹಣಾಹಣಿ
  • ಸದ್ಯ ಕಾಂಗ್ರೆಸ್ ಒಟ್ಟು​​ 30 ಸೀಟುಗಳ ಮುನ್ನಡೆ

12:06 October 24

ಬಿಜೆಪಿ ಮತ್ತು ಕಾಂಗ್ರೆಸ್​​ ನಡುವೆ ನೇರ ಹಣಾಹಣಿ

ನವದೆಹಲಿ: ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅ. 21ರಂದು ಮತದಾನ ನಡೆದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 1169 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಸಂಜೆ ವೇಳೆಗೆ ಇಷ್ಟೂ ಜನರ ಭವಿಷ್ಯ ಹೊರಬೀಳಲಿದೆ.

11:44 October 24

ಬಿಜೆಪಿ-ಕಾಂಗ್ರೆಸ್​ ನಡುವೆ ಜಿದ್ದಿನ ಸಮರ!

ನವದೆಹಲಿ: ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅ. 21ರಂದು ಮತದಾನ ನಡೆದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 1169 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಸಂಜೆ ವೇಳೆಗೆ ಇಷ್ಟೂ ಜನರ ಭವಿಷ್ಯ ಹೊರಬೀಳಲಿದೆ.

Last Updated : Oct 24, 2019, 7:47 PM IST

ABOUT THE AUTHOR

...view details