ಕರ್ನಾಟಕ

karnataka

ETV Bharat / bharat

ಹರಿಯಾಣದಲ್ಲಿ ಮೋದಿ ಮಿತ್ರನಿಗಿದ್ಯಾ ಸೆಕೆಂಡ್ ಚಾನ್ಸ್​? 'ಕೈ'ಗೆ ಬಿಸಿ, ಬಿಎಸ್ಪಿ ಏಕಾಂಗಿ! ಸಂಪೂರ್ಣ ಚಿತ್ರಣ - ಹರಿಯಾಣ ವಿಧಾನಸಭಾ ಚುನಾವಣೆy ಸುದ್ದಿ

ಗಮನಿಸಬೇಕಾದ ಅಂಶವೆಂದರೆ, ಮಹಾರಾಷ್ಟ್ರದಂತೆ ಹರಿಯಾಣ ರಾಜ್ಯದಲ್ಲೂ ಬಿಜೆಪಿ ಆಡಳಿತದಲ್ಲಿದೆ. ಆರೆಸ್ಸೆಸ್​​ ಮೂಲಕ ಪಕ್ಷಕ್ಕೆ ಸೇರ್ಪಡೆಯಾದ ಮನೋಹರ್​​ ಲಾಲ್ ಖಟ್ಟರ್ 90 ಕ್ಷೇತ್ರಗಳಿರುವ ಹರಿಯಾಣ ರಾಜ್ಯದ ಹಾಲಿ ಸಿಎಂ.

ಹರಿಯಾಣ ಚುನಾವಣೆ

By

Published : Oct 18, 2019, 12:51 PM IST

ನವದೆಹಲಿ:ಮಹಾರಾಷ್ಟ್ರದ ಜೊತೆಗೆ ಹರಿಯಾಣದಲ್ಲೂ ಇದೇ ತಿಂಗಳ 21ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳು ಗೆಲುವಿಗಾಗಿ ರಣತಂತ್ರ ರೂಪಿಸಿವೆ.

ಗಮನಿಸಬೇಕಾದ ಅಂಶವೆಂದರೆ ಮಹಾರಾಷ್ಟ್ರದಂತೆ ಹರಿಯಾಣ ರಾಜ್ಯದಲ್ಲೂ ಬಿಜೆಪಿ ಆಡಳಿತದಲ್ಲಿದೆ. ಆರೆಸ್ಸೆಸ್​​ ಮೂಲಕ ಪಕ್ಷಕ್ಕೆ ಸೇರ್ಪಡೆಯಾದ ಮನೋಹರ್​​ ಲಾಲ್ ಖಟ್ಟರ್ 90 ಕ್ಷೇತ್ರಗಳಿರುವ ಹರಿಯಾಣ ರಾಜ್ಯದ ಹಾಲಿ ಸಿಎಂ.

2000ದಿಂದ 2014 ತನಕ ಬಿಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಖಟ್ಟರ್, 2014ರ ಹರಿಯಾಣ ಚುನಾವಣೆಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಪಕ್ಷದ ಎದುರಾಳಿ ಸುರೇಂದ್ರ ಸಿಂಗ್​ ನರ್ವಾಲ್​ರನ್ನು 63,736 ಮತದಿಂದ ಸೋಲಿಸಿದ ಖಟ್ಟರ್​​ ನಂತರದಲ್ಲಿ ಸಿಎಂ ಗಾದಿಗೇರಿದ್ದರು.

ಹರಿಯಾಣ ಹಾಲಿ ಸಿಎಂ ಮನೋಹರ್ ಲಾಲ್ ಖಟ್ಟರ್

ಮೋದಿ ಒಡನಾಟದಿಂದ ಒಲಿಯಿತೇ ಸಿಎಂ ಪಟ್ಟ..?

ಮನೋಹರ್​ ಲಾಲ್ ಖಟ್ಟರ್ ಆರೆಸ್ಸೆಸ್​ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. 1996ರ ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ಮೋದಿ ಜೊತೆಯಲ್ಲೇ ಪಕ್ಷಕ್ಕಾಗಿ ದುಡಿದಿದ್ದರು. ಗುಜರಾತ್ ಚುನಾವಣೆಯಲ್ಲೂ ಖಟ್ಟರ್ ಪಾತ್ರ ಮುಖ್ಯವಾಗಿತ್ತು. ಇದೇ ಕಾರಣಗಳು ಇಂದು ಅವರನ್ನು ಸಿಎಂ ಕುರ್ಚಿ ಮೇಲೆ ಕೂರಿಸಿದೆ ಎನ್ನುತ್ತವೆ ಪಕ್ಷದ ಆಂತರಿಕ ವಲಯ.

ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ...?

2014 ಚುನಾವಣೆಯಲ್ಲಿ 47 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಶಾಕ್ ನೀಡಿತ್ತು. ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲೂ ಕಾಂಗ್ರೆಸ್ ಗೆಲ್ಲೋ ನಿಟ್ಟಿನಲ್ಲಿ ಯೋಜನೆ ರೂಪಿಸಿಲ್ಲ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಇದರ ಜೊತೆಯಲ್ಲಿ ಕೆಲ ದಿನಗಳ ಹಿಂದೆ ಹರಿಯಾಣ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಅಶೋಕ್ ತನ್ವರ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

'ಮಹಾ' ಬಂಡಾಯದ ಬಿಸಿಗೆ ಕರಗುತ್ತಾ ಬಿಜೆಪಿ..?

ಹರಿಯಾಣದಲ್ಲಿ ಕಾಂಗ್ರೆಸ್ ಈ ಬಾರಿಯೂ ಪಕ್ಷ ಬಲವರ್ಧನೆ ಹಾಗೂ ಚುನಾವಣೆಗೆ ವ್ಯವಸ್ಥಿತವಾಗಿ ಇಳಿಯುವಲ್ಲಿ ಹಿಂದುಳಿದಿದೆ. ಇದು ಸಹಜವಾಗಿಯೇ ಆಡಳಿತ ಪಕ್ಷಕ್ಕೆ ಪೂರಕವಾಗಿ ಪರಿಣಮಿಸಿದೆ. ಇದಲ್ಲದೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಹರಿಯಾಣದ ಹತ್ತು ಕ್ಷೇತ್ರದಲ್ಲಿ ಜಯ ಗೆಲುವು ಕಂಡಿತ್ತು.

ಹರಿಯಾಣ ವಿಧಾನಸಭಾ ಚುನಾವಣೆಯ ಸಮಗ್ರ ಮಾಹಿತಿ

ಬಿಜೆಪಿ ಸಖ್ಯ ತೊರೆದ ಶಿರೋಮಣಿ ಅಕಾಲಿದಳ:

ಆಡಳಿತಾರೂಢ ಬಿಜೆಪಿಯ ಮೈತ್ರಿ ಕಡಿದುಕೊಂಡಿರುವ ಶಿರೋಮಣಿ ಅಕಾಲಿದಳ ತನ್ನ ಈ ಹಿಂದಿನ ಮೈತ್ರಿ ಪಕ್ಷ ಇಂಡಿಯನ್ ನ್ಯಾಷನಲ್ ಲೋಕದಳ(ಐಎನ್​ಎಲ್​ಡಿ) ಜೊತೆ ಮತ್ತೆ ಸೇರಿಕೊಂಡಿದೆ. 2014ರಲ್ಲಿ ಒಂದಾಗಿ ಚುನಾವಣೆ ಎದುರಿಸಿದ್ದ ಈ ಪಕ್ಷಗಳು ನಂತರದಲ್ಲಿ ಬೇರ್ಪಟ್ಟಿದ್ದವು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಐದು ವರ್ಷದ ಬಳಿಕ ಮತ್ತೆ ಒಂದಾಗಿವೆ.

ಉಳಿದ ಪಕ್ಷಗಳ ಕಥೆ ಏನು..?

ಇನ್ನುಳಿದಂತೆ ಹರಿಯಾಣದಲ್ಲಿ ಈ ಬಾರಿ ಬಹುಜನ ಸಮಾಜವಾದಿ ಪಾರ್ಟಿ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ. ಜನನಾಯಕ್​ ಜನತಾ ಪಾರ್ಟಿ ಜೊತೆಗೆ ಮೈತ್ರಿ ಮುರಿದು ಬಿದ್ದ ಬಳಿಕ ಬಿಎಸ್ಪಿ ಈ ಬಾರಿ ಏಕಾಂಗಿ ಸ್ಪರ್ಧೆಗೆ ಒಲವು ತೋರಿದೆ. ಆಮ್​ ಆದ್ಮಿ ಪಾರ್ಟಿ ಹಾಗೂ ಸ್ವರಾಜ್ ಇಂಡಿಯಾ ಪಾರ್ಟಿ ಸಹ ಹರಿಯಾಣದಲ್ಲಿ ಈ ಬಾರಿ ಚುನಾವಣೆಯಲ್ಲಿ ಕಾಣಿಸಿಕೊಂಡಿದ್ದರೂ ಸಹ ದೊಡ್ಡ ಮಟ್ಟದ ನಿರೀಕ್ಷೆಗಳಿಲ್ಲ.

ಪ್ರಚಾರದ ಅಂಶಗಳೇನು..?

ಬಿಜೆಪಿ ತನ್ನ ಅಭಿವೃದ್ಧಿ ಕಾರ್ಯಕ್ರಮಗಳನ್ನೇ ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದೆ. ಇದರ ಜೊತೆಯಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯೂ ಬಿಜೆಪಿ ಪ್ರಚಾರದ ಪ್ರಮುಖ ಅಂಶ.

ರೈತರ ಸಾಲಮನ್ನಾ, ಜಿಎಸ್​ಟಿ ಹಾಗೂ ನೂತನ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿಯ ವೈಫಲ್ಯಗಳನ್ನು ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಉಳಿದ ಪಕ್ಷಗಳು ಮತದಾರರ ಮುಂದಿಡುತ್ತಿದೆ. ಆದರೆ ಆರ್ಥಿಕ ಹಿಂಜರಿತ ಹಾಗೂ ಉದ್ಯೋಗ ಕಡಿತದ ವಿಚಾರ ಪ್ರಚಾರ ಭಾಷಣದಲ್ಲಿ ಕೇಳಿ ಬರುತ್ತಿಲ್ಲ.

2014ರ ವಿಧಾನಸಭಾ ಚುನಾವಣಾ ಫಲಿತಾಂಶ:

  • ಬಿಜೆಪಿ - 47
  • ಐಎನ್​​ಎಲ್​ಡಿ - 19
  • ಕಾಂಗ್ರೆಸ್ - 15
  • ಹರಿಯಾಣ ಜನಹಿತ ಕಾಂಗ್ರೆಸ್ - 2
  • ಬಿಎಸ್ಪಿ - 1
  • ಶಿರೋಮಣಿ ಅಕಾಲಿ ದಳ - 1
  • ಸ್ವತಂತ್ರ ಅಭ್ಯರ್ಥಿಗಳು - 5

ABOUT THE AUTHOR

...view details