ನವದೆಹಲಿ :ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಹಭಾಗಿಗಳ ಸಹಯೋಗದೊಂದಿಗೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(ಎಸ್‌ಐಐಪಿಎಲ್) ಅಭಿವೃದ್ಧಿಪಡಿಸಿರುವ ಭಾರತದ ಮೊದಲ ನ್ಯುಮೋಕೊಕಲ್ ಕಾಂಜುಗೇಟ್ ಲಸಿಕೆ "ನ್ಯುಮೋಸಿಲ್"ನ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಸೋಮವಾರ ಬಿಡುಗಡೆಗೊಳಿಸಿದರು.
'ನ್ಯುಮೋಸಿಲ್' ಲಸಿಕೆ ಬಿಡುಗಡೆಗೊಳಿದ ಸಚಿವ ಡಾ.ಹರ್ಷವರ್ಧನ್ - ಕೊರೊನಾ ಲಸಿಕೆ ಸಂಬಂಧಿತ ಸುದ್ದಿ
ಲಸಿಕೆಯ ಮೂಲಕ ಭಾರತವನ್ನು ಸ್ವಾವಲಂಬಿಯಾಗಿ ಮಾಡುವ ಈ ಪ್ರಯತ್ನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಸಾಧಾರಣ ಪ್ರಯತ್ನಗಳಿವೆ. ಭಾರತದ ಅಗತ್ಯಗಳಿಗೆ ಲಸಿಕೆ ಹಾಕುವಲ್ಲಿ ಎಸ್‌ಐಐಪಿಎಲ್ ಉತ್ತಮ ಸಾಧನೆಗೈದಿದೆ..
ಎಸ್‌ಐಐಪಿಎಲ್ ವಿಶ್ವದ ಅತಿದೊಡ್ಡ ಲಸಿಕೆಗಳ ಉತ್ಪಾದಕ ಎಂದು ಗುರುತಿಸಲಾಗಿದೆ. ಈ ಬಗ್ಗೆ ಮಾತನಾಡಿದ ಅವರು, ಸೀರಮ್ ಇನ್‌ಸ್ಟಿಟ್ಯೂಟ್‌ನ ಲಸಿಕೆಗಳನ್ನು 170 ದೇಶಗಳಲ್ಲಿ ಬಳಸಲಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ 'ಆತ್ಮನಿರ್ಭರ ಭಾರತ್' ದೃಷ್ಟಿಗೆ ಅನುಗುಣವಾಗಿ ಇದನ್ನು ರೂಪಿಸಿದ್ದು, ಈಗಾಗಲೇ ಭಾರತ ಸರ್ಕಾರದಿಂದ ನ್ಯುಮೋಕೊಕಲ್ ಕಾಂಜುಗೇಟ್ ಲಸಿಕೆಯ ಪರವಾನಿಗೆಯನ್ನು ಲಾಕ್ಡೌನ್ ಸಮಯದಲ್ಲಿ ಪಡೆದುಕೊಂಡಿದೆ ಎಂದು ಹೇಳಿದರು.
ಲಸಿಕೆಯ ಮೂಲಕ ಭಾರತವನ್ನು ಸ್ವಾವಲಂಬಿಯಾಗಿ ಮಾಡುವ ಈ ಪ್ರಯತ್ನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಸಾಧಾರಣ ಪ್ರಯತ್ನಗಳಿವೆ. ಭಾರತದ ಅಗತ್ಯಗಳಿಗೆ ಲಸಿಕೆ ಹಾಕುವಲ್ಲಿ ಎಸ್‌ಐಐಪಿಎಲ್ ಉತ್ತಮ ಸಾಧನೆಗೈದಿದೆ ಎಂದು ಈ ವೇಳೆ ಹೇಳಿದರು.