ಹೈದರಾಬಾದ್: ರಾಮೋಜಿ ಫಿಲಂ ಸಿಟಿಗೆ ಹಾರ್ಲೆ ಡೇವಿಡ್ಸನ್ ಬೈಕ್ ಸವಾರರು ಲಗ್ಗೆ ಇಟ್ಟಿದ್ದರು. ಫಿಲಂ ಸಿಟಿಯಲ್ಲಿ ಬಂಜಾರಾ ಚಾಪ್ಟರ್ನ ಹಾರ್ಲೆ ಓನರ್ಸ್ ಗ್ರೂಪ್ನಿಂದ 2 ದಿನಗಳ 8ನೇ ದಕ್ಷಿಣ ಹಾಗ್ ರ‍್ಯಾಲಿ ಅದ್ಧೂರಿಯಾಗಿ ನಡೆಯಿತು.
ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಹಾರ್ಲೆ ಡೇವಿಡ್ಸನ್ ಬೈಕ್ ರ‍್ಯಾಲಿ, ಮನ ಸೆಳೆದ ಲಕ್ಷಾಂತರ ರೂ. ಬೆಲೆಯ ಬೈಕ್ಗಳು - Southern HOG Rally
ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿ ಬಂಜಾರಾ ಚಾಪ್ಟರ್ನ ಹಾರ್ಲೆ ಓನರ್ಸ್ ಗ್ರೂಪ್ನಿಂದ 2 ದಿನಗಳ 8ನೇ ದಕ್ಷಿಣ ಹಾಗ್ ರ‍್ಯಾಲಿ (8th Southern HOG Rally) ನಡೆಯಿತು.
ಹಾಗ್ ರ‍್ಯಾಲಿ
ಇದಕ್ಕೂ ಮುನ್ನ ದೇಶಾದ್ಯಂತ ನಡೆದ ಬೈಕ್ ಸವಾರಿಯಲ್ಲಿ ಸುಮಾರು ಸಾವಿರ ಮಂದಿ ಹಾರ್ಲೆ ಡೇವಿಡ್ಸನ್ ಬೈಕ್ ಚಾಲಕರು ಭಾಗವಹಿಸಿದ್ದರು. ಪ್ರಮುಖ ಕಂಪನಿಗಳ ಸಿಇಒಗಳು, ಐಟಿ ವೃತ್ತಿಪರರು, ಕಾರ್ಪೊರೇಟ್ ಉದ್ಯೋಗಿಗಳು ಮತ್ತು ಎಲ್ಲಾ ವರ್ಗದ ಜನರು ಬೈಕ್ ಸವಾರಿಯಲ್ಲಿ ಪಾಲ್ಗೊಂಡಿದ್ದರು.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಾವು ಬೈಕ್‌ಗಳಲ್ಲಿ ಪ್ರಯಾಣಿಸಿದ್ದೇವೆ. ಈ ಬೈಕ್‌ಗಳ ಬೆಲೆ 12ರಿಂದ 61 ಲಕ್ಷ ರೂ.ಗಳಾಗಿದೆ. ಹಾರ್ಲೆ ಡೇವಿಡ್ಸನ್ ಜನಪ್ರಿಯತೆಯು ಸಾರ್ವಕಾಲಿಕ ವಾದುದು ಎನ್ನುತ್ತಾರೆ ಬೈಕ್ ಸವಾರರೊಬ್ಬರು.
Last Updated : Sep 21, 2019, 8:47 PM IST