ಹರಿಯಾಣ ವಿಧಾನ ಸಭಾ ಚುನಾವಣೆ 2019ರ ಮತ ಎಣಿಕೆ ಕಾರ್ಯ ಭರದಿಂದ ಸಾಗುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾ ನೇರ ಫೈಟ್ ಇದೆ. ಸದ್ಯದ ಮತ ಎಣಿಕೆ ಪ್ರಕಾರ ಬಿಜೆಪಿ ಅಲ್ಪ ಹಿನ್ನೆಡೆಯಲ್ಲಿದ್ದು, ಕಾಂಗ್ರೆಸ್ 30 ಸೀಟುಗಳ ಮುನ್ನಡೆ ಸಾಧಿಸಿದೆ.
ಹರಿಯಾಣದಲ್ಲಿ ಗದ್ದುಗೆ ಏರಲು 46 ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಜೆಪಿಯ ದುಶ್ಯಂತ್ ಚೌಟಾಲರನ್ನು ಭೇಟಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊಂಡರೆ ಜೆಜೆಪಿ ಪಕ್ಷ ದುಶ್ಯಂತ್ ಚೌಟಾಲಗೆ ಸಿಎಂ ಸ್ಥಾನ ನೀಡುವುದಾಗ ಕಾಂಗ್ರೆಸ್ ತಿಳಿಸಿದೆ.