ಕರ್ನಾಟಕ

karnataka

ETV Bharat / bharat

ರಾಮ ಮಂದಿರ ನಿರ್ಮಾಣಕ್ಕೆ 21 ಸಾವಿರ ರೂ. ದೇಣಿಗೆ ನೀಡಿದ ಹಾರ್ದಿಕ್​ ಪಟೇಲ್ - ಹಾರ್ದಿಕ್​ ಪಟೇಲ್​

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಎಲ್ಲೆಡೆಯಿಂದ ಸಾಕಷ್ಟು ದೇಣಿಗೆ ಹರಿದು ಬರುತ್ತಿದೆ.

Hardik Patel
Hardik Patel

By

Published : Aug 6, 2020, 3:29 PM IST

ಅಹಮದಾಬಾದ್​:ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಕಾಂಗ್ರೆಸ್​​ ಮುಖಂಡ ಹಾರ್ದಿಕ್​ ಪಟೇಲ್​ 21,000 ರೂಪಾಯಿ ದೇಣಿಗೆ ನೀಡಿದ್ದಾರೆ.

ಧರ್ಮದ ಬಗ್ಗೆ ತಮಗೆ ಅಪಾರವಾದ ನಂಬಿಕೆ ಇದ್ದರೂ ಏಕದೃಷ್ಟಿ ಹೊಂದಿಲ್ಲ. ಈ ದೇವಾಲಯ ನಿರ್ಮಾಣ ದೇಶದಲ್ಲಿ ರಾಮ ರಾಜ್ಯ ನಿರ್ಮಿಸಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಟ್ಟಿದ್ದಾರೆ.

ಪಾಟೀದಾರ್​ ಸಮುದಾಯದ ಹೋರಾಟಗಾರ ಹಾರ್ದಿಕ್​ ಪಟೇಲ್ ಕಳೆದ ಕೆಲ ದಿನಗಳ ಹಿಂದೆ ಗುಜರಾತ್​ ಕಾಂಗ್ರೆಸ್​​ ಘಟಕದ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕವಾಗಿದ್ದರು.

ABOUT THE AUTHOR

...view details