ದಾಹೋಡ್:ಪತಿ ಮತ್ತು ಅಳಿಯಂದಿರ ಕಿರುಕುಳದಿಂದ ಬೇಸತ್ತ 32 ವರ್ಷದ ಮಹಿಳೆಯೋರ್ವಳು ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತಿನ ದಾಹೋಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ನಾನಾ ಸರ್ನೈಯಾ ಎಂಬ ಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ಪತಿ ಮತ್ತು ಅಳಿಯಂದಿರ ಕಿರುಕುಳ ತಾಳಲಾರದೇ ತನ್ನ ಮೂರು ತಿಂಗಳ ಮಗ ಮತ್ತು ಐದು ವರ್ಷದ ಮಗಳನ್ನು ಬಾವಿಗೆ ಎಸೆದ ಸರಸ್ವತಿ ದಾಮೋರ್ ಎಂಬ ಮಹಿಳೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ.