ಕರ್ನಾಟಕ

karnataka

ETV Bharat / bharat

ಹಾಸಿಗೆ ಹಿಡಿದ ಅಮ್ಮನಾಸೆ ಈಡೇರಿಸಲು ವಿಡಿಯೋ ಕಾನ್ಫರೆನ್ಸ್​ ಮೂಲಕ ಮದುವೆಯಾದ ಪೇದೆ - ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಾಹವಾದ ಪೇದೆ

ತನ್ನ ತಾಯಿಯ ಆಸೆಯನ್ನು ಇಡೇರಿಸುವ ಸಲುವಾಗಿ ಉತ್ತರ ಪ್ರದೇಶ ಮೂಲದ ಪೊಲೀಸ್ ಪೇದೆಯೊಬ್ಬರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಾಹವಾಗಿದ್ದಾರೆ.

Police Constable ties nuptial knot via video conference
ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಾಹ

By

Published : Apr 20, 2020, 10:13 AM IST

ಹಾಪುರ್(ಉತ್ತರ ಪ್ರದೇಶ): ದೇಶವ್ಯಾಪಿ ಲಾಕ್​ಡೌನ್​ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯೊಬ್ಬರು ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿವಾಹವಾದ ಘಟನೆ ಉತ್ತರ ಪ್ರದೇಶದ ಹಾಪುರ್​ನಲ್ಲಿ ನಡೆದಿದೆ.

ಈ ಹಿಂದೆ ಮದುವೆ ದಿನವನ್ನು ನಿರ್ಧರಿಸಲಾಗಿತ್ತು. ಆದರೆ ಲಾಕ್​ಡೌನ್​ ಜಾರಿಯಾದ ಹಿನ್ನೆಲೆಯಲ್ಲಿ ಮದುವೆಯಾಗಲು ಸಾಧ್ಯವಾಗಲಿಲ್ಲ. ನನ್ನ ತಾಯಿಯ ಆಗೋಗ್ಯ ಸರಿಯಿಲ್ಲ. ಆಕೆ ನನ್ನ ವಿವಾಹವನ್ನು ನೋಡುವ ಬಯಕೆ ಹೊಂದಿದ್ದಾಳೆ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮದುವೆಯಾಗಿದ್ದಾಗಿ ಪೇದೆ ಮೊಹ್ಸಿನ್ ಸೈಫಿ ಹೇಳಿದ್ದಾರೆ.

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು, ನಾವು ಲಾಕ್​ಡೌನ್ ನಿಯಮಗಳನ್ನುಅನುಸರಿಸಬೇಕು. ಹೀಗಾಗಿ ನನ್ನನ್ನು ಹೊರತುಪಡಿಸಿದ್ರೆ ಇನಾಮ್ ಮತ್ತು ಇತರೆ ಇಬ್ಬರು ಸಾಕ್ಷಿಗಳು ಮಾತ್ರ ಒಟ್ಟಾಗಿ ಸೇರಿದ್ದೆವು. ವಧು ಸೇರಿದಂತೆ ಸುಮಾರು 100 ಜನರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಾಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು ಎಂದಿದ್ದಾರೆ.

ABOUT THE AUTHOR

...view details