ಕರ್ನಾಟಕ

karnataka

ETV Bharat / bharat

ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುತ್ತಿರುವುದು ಅತೀವ ಸಂತಸ ತಂದಿದೆ: ದ. ಕೊರಿಯಾ ರಾಯಭಾರಿ - ಅಯೋಧ್ಯೆ ರಾಮಮಂದಿರ

ಬಹಳ ವರ್ಷಗಳ ನಂತರ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಮಾಡುತ್ತಿರುವುದು ನನಗೆ ತುಂಬಾ ಸಮಾಧಾನವಾಗಿದೆ. ಎಲ್ಲರೂ ಈ ನಿರ್ಧಾರವನ್ನು ಪಾಲಿಸಿದ್ದಾರೆಂದು ಹೇಳಲು ನನಗೆ ಸಂತೋಷವಾಗಿದೆ. ಇದು ಭಾರತದ ಕಾನೂನು ವ್ಯವಸ್ಥೆಯ ನಿಜವಾದ ಶಕ್ತಿ ಎಂದು ಭಾರತದಲ್ಲಿನ ದಕ್ಷಿಣ ಕೊರಿಯಾದ ರಾಯಭಾರಿ ಶಿನ್ ಬಾಂಗ್ ಕಿಲ್ ಹೇಳಿದರು.

South Korean Envoy
ದಕ್ಷಿಣ ಕೊರಿಯಾದ ರಾಯಭಾರಿ ಶಿನ್ ಬಾಂಗ್ ಕಿಲ್

By

Published : Aug 4, 2020, 5:42 AM IST

ನವದೆಹಲಿ:ಸಿಯೋಲ್‌ನೊಂದಿಗೆ ಮಹತ್ವದ ಸಂಬಂಧ ಇರುವುದರಿಂದ ಅಯೋಧ್ಯೆ ಸಂಬಂಧಿತ ಸಂಘರ್ಷ ಸುಖಾಂತ್ಯವ ಆಗುತ್ತಿರುವುದನ್ನು ನೋಡುವುದಕ್ಕೆ ಸಂತೋಷವಾಗಿದೆ ಎಂದು ಭಾರತದಲ್ಲಿನ ದಕ್ಷಿಣ ಕೊರಿಯಾದ ರಾಯಭಾರಿ ಶಿನ್ ಬಾಂಗ್ ಕಿಲ್ ಸಂತಸ ವ್ಯಕ್ತಪಡಿಸಿದರು.

ಬಹಳ ವರ್ಷಗಳ ನಂತರ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಮಾಡುತ್ತಿರುವುದು ನನಗೆ ತುಂಬಾ ಸಮಾಧಾನವಾಗಿದೆ. ಎಲ್ಲರೂ ಈ ನಿರ್ಧಾರವನ್ನು ಪಾಲಿಸಿದ್ದಾರೆಂದು ಹೇಳಲು ನನಗೆ ಸಂತೋಷವಾಗಿದೆ. ಇದು ಭಾರತದ ಕಾನೂನು ವ್ಯವಸ್ಥೆಯ ನಿಜವಾದ ಶಕ್ತಿ ಎಂದು ಹೇಳಿದರು.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕಿಮ್ ಜಂಗ್ ಸೂಕ್ ಅವರು 2018ರಲ್ಲಿ ಅಯೋಧ್ಯೆಯ ಕ್ವೀನ್ ಹುಹ್ ಪಾರ್ಕ್‌ನಲ್ಲಿ ರಾಣಿ ಹುಹ್ ಸ್ಮಾರಕವನ್ನು ಉದ್ಘಾಟಿಸಿದ್ದರು ಎಂದು ರಾಯಭಾರಿ ಹೇಳಿದರು.

ಕೊರೊನಾ ವೈರ್ಸ್​ ಸಾಂಕ್ರಾಮಿಕ ರೋಗದಿಂದಾಗಿ ಭಾರತ ಮತ್ತು ಕೊರಿಯನ್ ಪಾರ್ಕ್ ಪೆವಿಲಿಯನ್ ಎರಡನ್ನೂ ಈ ವರ್ಷ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಕೊರಿಯನ್ ಪೆವಿಲಿಯನ್‌ಗೆ ಬೇಕಾದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಮುಂದಿನ ವರ್ಷದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಔಷಧ ಉದ್ಯಮದಲ್ಲಿ ಭಾರತವು ಬಹಳ ಪ್ರಮುಖ ಪಾಲುದಾರ ಆಗಿರುವುದರಿಂದ ದಕ್ಷಿಣ ಕೊರಿಯಾದ ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆ ದೆಹಲಿಯಲ್ಲಿ ವಿದೇಶಿ ಕಚೇರಿ ಸ್ಥಾಪಿಸಲು ಯೋಜಿಸುತ್ತಿದೆ ಎಂದು ಸಂದರ್ಶನವೊಂದರಲ್ಲಿ ರಾಯಭಾರಿ ಘೋಷಿಸಿದರು.

ಲಸಿಕೆಗಳ ವಿಷಯದಲ್ಲಿ ಭಾರತ ಯಾವಾಗಲೂ ಮಹತ್ವದ್ದಾಗಿದೆ ಮತ್ತು ಸದೃಢವಾದ ಔಷಧ ಉದ್ಯಮವನ್ನು ಹೊಂದಿದೆ. ಕೊರಿಯಾವು ಲಸಿಕೆ (ಕೋವಿಡ್​-19) ಅಭಿವೃದ್ಧಿಗೆ ಶ್ರಮಿಸುತ್ತಿರುವ ಒಂದೆರಡು ದೊಡ್ಡ ಕಂಪನಿಗಳನ್ನು ಸಹ ಹೊಂದಿದೆ. ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆ ದೆಹಲಿಯಲ್ಲಿ ವಿದೇಶಿ ಕಚೇರಿಯನ್ನು ಸ್ಥಾಪಿಸಲು ಯೋಜಿಸುತ್ತಿದೆ ಅವರು ಹೇಳಿದರು.

ಭಾರತ-ದಕ್ಷಿಣ ಕೊರಿಯಾದ ಸಂಬಂಧ ಕುರಿತು ಮಾತನಾಡಿದ ಅವರು, ಕೊರಿಯಾದ ಹಳೆಯ ಏಷ್ಯಾದ ಇತಿಹಾಸ ಪುಸ್ತಕಗಳಲ್ಲಿ ಭಾರತೀಯ ರಾಜಕುಮಾರಿ ಸ್ಥಳೀಯ ಕೊರಿಯಾದ ರಾಜ ಕಿಮ್ ಸುರೋನನ್ನು ಮದುವೆಯಾದ ಕಥೆಗಳಿವೆ. ಈ ಮೊದಲು ಜನರು ಇದನ್ನು ಕೇವಲ ದಂತಕಥೆಯೆಂದು ಪರಿಗಣಿಸುತ್ತಿದ್ದರು. ಪುರಾತತ್ತ್ವಜ್ಞರು ಕರಕ್ ಸಾಮ್ರಾಜ್ಯಗಳ ಸಮಾಧಿಗಳಲ್ಲಿ ಭಾರತೀಯ ಕಲಾಕೃತಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದರು.

ABOUT THE AUTHOR

...view details