ಲಖನೌ(ಉತ್ತರ ಪ್ರದೇಶ):ಅಂತಾರಾಷ್ಟ್ರೀಯ ಶೂಟರ್ ವರ್ತಿಕಾ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ರಕ್ತದಲ್ಲಿ ಪತ್ರ ಬರೆದಿದ್ದು, ನಿರ್ಭಯಾ ಅಪರಾಧಿಗಳನ್ನು ಓರ್ವ ಮಹಿಳೆಯಿಂದಲೇ ಗಲ್ಲಿಗೇರಿಸಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.
ನಿರ್ಭಯಾ ಅಪರಾಧಿಗಳನ್ನು ನಾನೇ ಗಲ್ಲಿಗೇರಿಸುತ್ತೇನೆ: ಶಾಗೆ ರಕ್ತದಲ್ಲಿ ಪತ್ರ ಬರೆದ ಮಹಿಳಾ ಶೂಟರ್ - shooter Vartika Singh on Nirbhaya case
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳು ನನ್ನಿಂದಲೇ ಗಲ್ಲಿಗೇರಬೇಕು. ಈ ಮೂಲಕ ಒಬ್ಬ ಮಹಿಳೆ ಕೂಡಾ ಫಾಸಿದಾರ(hangman)ನ ಕೆಲಸ ಮಾಡಬಹುದು ಎಂಬ ಸಂದೇಶ ಇಡೀ ದೇಶಕ್ಕೆ ರವಾನೆಯಾಗಬೇಕು. ಹೀಗಾಗಿ ನನಗೆ ದೇಶದ ಎಲ್ಲಾ ನಟಿಯರು, ಸಂಸದೆಯರು ಬೆಂಬಲ ನೀಡಬೇಕು ಎಂದು ಅಂತಾರಾಷ್ಟ್ರೀಯ ಶೂಟರ್ ವರ್ತಿಕಾ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ರಕ್ತದಲ್ಲಿ ಪತ್ರ ಬರೆದು ಮನವಿ ಮಾಡಿದ್ದಾರೆ.
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳಿಗೆ ಕಳೆದ ವರ್ಷವೇ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಶೀಘ್ರದಲ್ಲೇ ನಾಲ್ಕೂ ಅಪರಾಧಿಗಳನ್ನು ಗಲ್ಲಿಗೇರಿಸುವ ಸಾಧ್ಯತೆ ಇದೆ. ಹೀಗಾಗಿ ಈ ನಾಲ್ಕೂ ಅಪರಾಧಿಗಳು ನನ್ನಿಂದಲೇ ಗಲ್ಲಿಗೇರಬೇಕು. ಈ ಮೂಲಕ ಒಬ್ಬ ಮಹಿಳೆ ಕೂಡಾ ಫಾಸಿದಾರ(hangman)ನ ಕೆಲಸ ಮಾಡಬಹುದು ಎಂಬ ಸಂದೇಶ ಇಡೀ ದೇಶಕ್ಕೆ ರವಾನೆಯಾಗಬೇಕು. ಹೀಗಾಗಿ ನನಗೆ ದೇಶದ ಎಲ್ಲಾ ನಟಿಯರು, ಸಂಸದೆಯರು ಬೆಂಬಲ ನೀಡಬೇಕು ಎಂದು ವರ್ತಿಕಾ ಸಿಂಗ್ ಮನವಿ ಮಾಡಿದ್ದಾರೆ.
ದೇಶಾದ್ಯಂತ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ನಿರ್ಭಯಾ ಆರೋಪಿಗಳ ಮೇಲೂ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ಈ ಅಪರಾಧಿಗಳನ್ನು ನೇಣಿಗೇರಿಸಲು ಫಾಸಿದಾರ(hangman)ನ ಕೆಲಸ ಮಾಡಲು ನಮಗೆ ಹಲವು ಅರ್ಜಿಗಳು ಬರುತ್ತಿವೆ ಎಂದು ಈ ಹಿಂದೆಯೇ ತಿಹಾರ್ ಜೈಲಾಧಿಕಾರಿಗಳು ತಿಳಿಸಿದ್ದರು.