ಕರ್ನಾಟಕ

karnataka

ETV Bharat / bharat

ಅಪರಾಧಿಗಳನ್ನು ನೇಣಿಗೆ ಹಾಕಿದ್ದು ನಿರ್ಭಯಾಗೆ ಸಂದ 'ನಿಜವಾದ ಶ್ರದ್ಧಾಂಜಲಿ': ತನಿಖಾಧಿಕಾರಿಗಳು - ನಿರ್ಭಯಾ ಪ್ರಕರಣ

ನಿರ್ಭಯಾ ಅತ್ಯಾಚಾರಿಗಳನ್ನ ನೇಣಿಗೇರಿಸಿದ್ದು, ಆಕೆಗೆ ಸಲ್ಲಿಸಿದ ನಿಜವಾದ ಶ್ರದ್ಧಾಂಜಲಿ ಎಂದು ನಿರ್ಭಯಾ ಕೇಸ್​​ನ ತನಿಖಾಧಿಕಾರಿಗಳು ತಿಳಿಸಿದ್ದಾರೆ.

Hanging of convicts real tribute to Nirbhaya: Investigators
ನಿರ್ಭಯಾ ಕೇಸ್

By

Published : Mar 20, 2020, 11:57 AM IST

ನವದೆಹಲಿ:ನಿರ್ಭಯಾ ಹಂತಕರನ್ನು ಇಂದು ಗಲ್ಲಿಗೇರಿಸಿದ್ದು, ನಿರ್ಭಯಾಳಿಗೆ ಸಲ್ಲಿಸಿದ ನಿಜವಾದ ಶ್ರದ್ಧಾಂಜಲಿ ಎಂದು ನಿರ್ಭಯಾ ಕೇಸ್​​ ತನಿಖಾ ಅಧಿಕಾರಿಗಳು ಹೇಳಿದ್ರು.

2012 ರಲ್ಲಿ ನಿರ್ಭಯಾ ತನಿಖಾ ತಂಡದ ಹೆಚ್ಚುವರಿ ಡಿಸಿಪಿ (ದಕ್ಷಿಣ) ಆಗಿದ್ದ ಮತ್ತು ತನಿಖಾ ತಂಡದ ನೇತೃತ್ವ ವಹಿಸಿದ್ದ ಪ್ರಮೋದ್ ಸಿಂಗ್ ಕುಶ್ವಾಹ ಈ ಬಗ್ಗೆ ಮಾತನಾಡಿ, ದೆಹಲಿಯಲ್ಲಿ ಬಸ್​​ನಲ್ಲಿ ಹೋಗುವ ವೇಳೆ ಕ್ರೂರವಾಗಿ ಅತ್ಯಾಚಾರಕ್ಕೊಳಗಾದ 23 ವರ್ಷದ ಪ್ಯಾರಾ ಮೆಡಿಕಲ್​​ ವಿದ್ಯಾರ್ಥಿನಿ ನಿರ್ಭಯಾಳನ್ನು ಅತ್ಯಾಚಾರಗೈದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಿದ್ದು, ಆಕೆಯ ಸಾವಿಗೆ ಸಂದ ನಿಜವಾದ ಶ್ರದ್ಧಾಂಜಲಿ ಎಂದಿದ್ದಾರೆ.

ನಿರ್ಭಯಾ ಅತ್ಯಾಚಾರ ಕೇಸ್​​ ತನಿಖಾ ತಂಡದಲ್ಲಿದ್ದ ನಮ್ಮ ಪ್ರತಿಯೊಬ್ಬ ಸದಸ್ಯರು ಬಹಳ ಶ್ರಮಪಟ್ಟಿದ್ದಾರೆ ಎಂದಿದ್ದಾರೆ. ಅಪರಾಧಿಗಳನ್ನು ನೇಣಿಗೆ ಹಾಕಿದ್ದು ನಮ್ಮನ್ನು ಅಗಲಿದ ನಿರ್ಭಯಾ ಆತ್ಮಕ್ಕೆ ಇಂದು ಸಂದ ನಿಜವಾದ ಶ್ರದ್ಧಾಂಜಲಿ ಎಂದಿದ್ದಾರೆ.ಇನ್ಸ್​​ಪೆಕ್ಟರ್​​​ ಅನಿಲ್​ ಶರ್ಮಾ ಮಾತನಾಡಿ, ಇದು ನಿರ್ಭಯಾಗೆ ನಿಜವಾದ ಶ್ರದ್ಧಾಂಜಲಿ. ನಮ್ಮ ತಂಡ ಈ ಕೇಸ್​​ ನ ವಿಚಾರಣೆಯ ಎಲ್ಲಾ ಸಮಯದಲ್ಲೂ ನಿರ್ಭಯಾ ಕುಟುಂಬದ ಜೊತೆ ಇತ್ತು ಎಂದ್ರು.

2012 ಡಿಸೆಂಬರ್​​ 16 ರ ರಾತ್ರಿ ದೆಹಲಿಯ ಬಸ್​​ನಲ್ಲಿ ತನ್ನ ಗೆಳೆಯನೊಂದಿಗೆ ತೆರಳುತ್ತಿದ್ದ ಪ್ಯಾರಾಮೆಡಿಕಲ್​​ ವಿದ್ಯಾರ್ಥಿನಿ ನಿರ್ಭಯಾಳ ಮೇಲೆ 6 ಜನ ಪಾಪಿಗಳು ಅತ್ಯಂತ ಅಮಾನುಷವಾಗಿ ಅತ್ಯಾಚಾರಗೈದು ನಿರ್ಭಯಾ ಹಾಗೂ ಆಕೆಯ ಗೆಳೆಯನನ್ನು ರಸ್ತೆಗೆ ಎಸೆದು ಹೋಗಿದ್ದರು.ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರ್​​ ಆಸ್ಪತ್ರಗೆ ದಾಖಲಿಸಲಾಯ್ತು. ಆದರೆ ನಿರ್ಭಯಾ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಳು.

ಇನ್ನು 6 ಆರೋಪಿಗಳಲ್ಲಿ ಒಬ್ಬ ಬಾಲಾಪರಾಧಿಯಾಗಿದ್ದ ಕಾರಣ 3 ವರ್ಷಗಳ ಜೈಲುಶಿಕ್ಷೆ ವಿಧಿಸಲಾಯ್ತು. 2015 ರಲ್ಲಿ ಆತನನ್ನು ಬಿಡುಗಡೆ ಮಾಡಲಾಯ್ತು. ಪ್ರಕರಣದ ಮತ್ತೋರ್ವ ಆರೋಪಿ ತಿಹಾರ್​​ ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾದ.ಉಳಿದ 4 ಆರೋಪಿಗಳು 7 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಇಂದು ಬೆಳಿಗ್ಗೆ 5 :30 ಕ್ಕೆ ಈ ನಾಲ್ಕು ಅಪರಾಧಿಗಳನ್ನು ಗಲ್ಲಿಗೇರಿಸಲಾಯ್ತು.

ABOUT THE AUTHOR

...view details