ನವದೆಹಲಿ :ಔಷಧಿ ವಿತರಕರು ಮತ್ತು ಔಷಧಿ ತಯಾರಕರ ತೀವ್ರ ಲಾಬಿಯ ನಡುವೆಯೂ ಕೇಂದ್ರ ಸರ್ಕಾರವು ಅಧಿಕೃತವಾಗಿ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಬ್ರಿಟಿಷ್ ಕಾಲದ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯ ವ್ಯಾಪ್ತಿಯಿಂದ ಮುಕ್ತಗೊಳಿಸಿದೆ.
ಕೋವಿಡ್ ಹೋರಾಟಕ್ಕೆ ಸ್ಯಾನಿಟೈಸರ್ ಅಗತ್ಯ ; ಅವುಗಳ ಮಾರಾಟಕ್ಕೆ ಪರವಾನಗಿ ಅಗತ್ಯವಿಲ್ಲ - ಸ್ಯಾನಿಟೈಸರ್ ಮಾರಾಟಕ್ಕೆ ಪರವಾನಗಿ ಅಗತ್ಯವಿಲ್ಲ
ಕೇಂದ್ರದ ಗೆಜೆಟ್ ಅಧಿಸೂಚನೆಯು ಯಾವುದೇ ಅಂಗಡಿಗಳು, ಕಾಸ್ಮೆಟಿಕ್ಸ್ ಕಾನೂನಿನಡಿ ಪರವಾನಗಿ ಪಡೆಯದೆ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಸಂಗ್ರಹಿಸಲು ಮತ್ತು ಮಾರಾಟ ಮಾಡಲು ಅನುಮತಿಸುತ್ತದೆ..
![ಕೋವಿಡ್ ಹೋರಾಟಕ್ಕೆ ಸ್ಯಾನಿಟೈಸರ್ ಅಗತ್ಯ ; ಅವುಗಳ ಮಾರಾಟಕ್ಕೆ ಪರವಾನಗಿ ಅಗತ್ಯವಿಲ್ಲ sanitizers](https://etvbharatimages.akamaized.net/etvbharat/prod-images/768-512-8214019-970-8214019-1596015736509.jpg)
ಕೋವಿಡ್-19 ವಿರುದ್ಧದ ದೇಶದ ಹೋರಾಟಕ್ಕೆ ಸ್ಯಾನಿಟೈಸರ್ಗಳು ಬಹಳ ಅತ್ಯಗತ್ಯವೆಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ. ಇದು ದೇಶದ ಜನರಿಗೆ ಬೇಕಾದ ಪ್ರಮಾಣದಲ್ಲಿ ಸಿಗಬೇಕಾಗಿದೆ ಎಂದು ಹೇಳಿದೆ. 1940ರ ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಯ ಸೆಕ್ಷನ್ 26ಬಿ ನೀಡುವ ಅಧಿಕಾರವನ್ನು ಚಲಾಯಿಸಿದ ಸರ್ಕಾರ, ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಯ ನಿಬಂಧನೆಗಳ ಅಡಿ ಹ್ಯಾಂಡ್ ಸ್ಯಾನಿಟೈಸರ್ ಔಷಧಿಯ ಮಾರಾಟಕ್ಕೆ ಪರವಾನಗಿಯ ಅವಶ್ಯಕತೆಯಿಂದ ವಿನಾಯಿತಿ ನೀಡಬೇಕೆಂದು ಕೇಂದ್ರ ಸರ್ಕಾರ ನಿರ್ದೇಶಿಸುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ತಿಳಿಸಿದೆ.
ಆದರೆ, ಯಾವುದೇ ವ್ಯಕ್ತಿಯು ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ಮಾರಾಟ ಮಾಡಲು ಮತ್ತು ಸಂಗ್ರಹಿಸಲು 1945ರ ಔಷಧ ಮತ್ತು ಸೌಂದರ್ಯವರ್ಧಕ ನಿಯಮಗಳ ನಿಬಂಧನೆಗಳನ್ನು ಅನುಸರಿಸುವ ಅಗತ್ಯವಿರುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೇಂದ್ರದ ಗೆಜೆಟ್ ಅಧಿಸೂಚನೆಯು ಯಾವುದೇ ಅಂಗಡಿಗಳು, ಕಾಸ್ಮೆಟಿಕ್ಸ್ ಕಾನೂನಿನಡಿ ಪರವಾನಗಿ ಪಡೆಯದೆ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಸಂಗ್ರಹಿಸಲು ಮತ್ತು ಮಾರಾಟ ಮಾಡಲು ಅನುಮತಿಸುತ್ತದೆ.