ಬೆಂಗಳೂರು:ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಎಚ್‌ಎಎಲ್‌ನ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ಎಲ್‌ಯುಹೆಚ್) ಇತ್ತೀಚೆಗೆ ಸುಮಾರು 10 ದಿನಗಳವರೆಗೆ ಹಿಮಾಲಯದ ಹವಾಮಾನ ಪರಿಸ್ಥಿತಿಯಲ್ಲಿ ಹಾರಾಟ ನಡೆಸಿತು.
ಹಿಮಾಲಯದ ಶುಷ್ಕ ಪರಿಸರದಲ್ಲಿ ಪ್ರಯೋಗ ಪೂರ್ಣಗೊಳಿಸಿದ HAL ಹೆಲಿಕಾಪ್ಟರ್
ಹಿಮಾಲಯದ ಹವಾಮಾನ ಪರಿಸ್ಥಿತಿ ಮತ್ತು ಸಿಯಾಚಿನ್ನ ಎತ್ತರದ ಪ್ರದೇಶದಲ್ಲಿ ಎಚ್‌ಎಎಲ್‌ನ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ತನ್ನ ಪ್ರಯೋಗಗಳನ್ನು ಪೂರ್ಣಗೊಳಿಸಿದೆ.
hal
ಲೇಹ್ನಲ್ಲಿ ಕಾರ್ಯಕ್ಷಮತೆಯ ಸಮಗ್ರ ಪರೀಕ್ಷಾ ಯೋಜನೆಯನ್ನು ಕಾರ್ಯಗತಗೊಳಿಸಲಾಯಿತು. ಸಿಯಾಚಿನ್ ಹಿಮನದಿಯ ಎತ್ತರದ ಪ್ರದೇಶದಲ್ಲಿ ಹೆಲಿಕಾಪ್ಟರ್ ತನ್ನ ಪೇಲೋಡ್ ಸಾಮರ್ಥ್ಯವನ್ನು ಪ್ರದರ್ಶಿಸಿತು.
ಪ್ರಯೋಗಗಳ ಸಮಯದಲ್ಲಿ, ಪೈಲಟ್‌ಗಳು ಹೆಲಿಕಾಪ್ಟರನ್ನು ಅಮರ್ ಮತ್ತು ಸೋನಮ್‌ನ ಅತೀ ಎತ್ತರದ ಹೆಲಿಪ್ಯಾಡ್‌ಗಳಲ್ಲಿ ಇಳಿಸಿದರು. ಈ ಮೂಲಕ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಎಚ್‌ಎಎಲ್ ತನ್ನ ಸ್ಥಳೀಯ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.