ಮಾರಿಷಸ್ ಸಮುದ್ರದಲ್ಲಿ ಬಂಡೆಗೆ ಡಿಕ್ಕಿ ಹೊಡೆದು ಅಪಾಯಕ್ಕೆ ಸಿಲುಕಿರುವ ಹಡಗಿನಲ್ಲಿದ್ದ ಜನರ ರಕ್ಷಣಾ ಕಾರ್ಯಾಚರಣೆಯಲ್ಲಿ ಹೆಚ್‌ಎಎಲ್ ವಿಮಾನಗಳು ಪಾಲ್ಗೊಂಡಿವೆ.
ಎಚ್‌ಎಎಲ್‌ನ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್‌ಗಳಾದ 'ಧ್ರುವ್' ಮತ್ತು 'ಚೇತಕ್' ಅನ್ನು ಕಾರ್ಯಾಚರಣೆಗಾಗಿ ಕಳುಹಿಸಲಾಗಿದೆ. ಅಲ್ಲಿರುವ ಜನರನ್ನು ರಕ್ಷಿಸಲು ಮತ್ತು ಜಪಾನ್ ಒಡೆತನದ ಸರಕು ಹಡಗು ಎಂ.ವಿ.ವಾಕಶಿಯೊದಿಂದ ತೈಲವನ್ನು ಹೊರತೆಗೆಯಲು ಈ ಹೆಲಿಕಾಪ್ಟರ್ಗಳು ಸಹಕಾರಿಯಾಗಲಿವೆ ಎಂದು ಎಚ್‌ಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಈ ಕುರಿತು ಮಾತನಾಡಿರುವ ಎಚ್‌ಎಎಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಆರ್. ಮಾಧವನ್, ಧ್ರುವ ಹೆಲಿಕಾಪ್ಟರ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ನಮ್ಮ ಹೆಲಿಕಾಪ್ಟರ್‌ಗಳನ್ನು ಈ ಹಿಂದೆ ಶೋಧ ಮತ್ತು ಅನೇಕ ಕಾರ್ಯಾಚರಣೆಗಾಗಿ ಬಳಕೆಯಾಗಿವೆ ಎಂದು ಹೇಳಿದರು.
ಪರಿಹಾರ ಕಾರ್ಯಾಚರಣೆ ಕಳೆದ ಮೂರು ದಿನಗಳಿಂದ ನಡೆಯುತ್ತಿದೆ. ಜುಲೈ 25ರಂದು ಎಂ.ವಿ.ವಾಕಾಶಿಯೊ ಮಾರಿಷಸ್‌ನ ಆಗ್ನೇಯ ಕರಾವಳಿಯ ಸಮುದ್ರದ ಬಂಡೆಯೊಂದಕ್ಕೆ ಡಿಕ್ಕಿ ಹೊಡೆದು ಸುಮಾರು 1,000 ಟನ್ ತೈಲ ಸೋರಿಕೆಯಾಗಿತ್ತು. ಈ ಹಡಗು ಚೀನಾದಿಂದ ಬ್ರೆಜಿಲ್‌ಗೆ ಪ್ರಯಾಣಿಸುವಾಗ ಅವಘಡ ಸಂಭವಿಸಿತ್ತು.