ಕರ್ನಾಟಕ

karnataka

ETV Bharat / bharat

ಶೀಘ್ರದಲ್ಲೇ 2021ರ ಹಜ್ ಯಾತ್ರೆ ಅರ್ಜಿಗಳ ಪ್ರಕ್ರಿಯೆ ಆರಂಭ: ಸಚಿವ ನಖ್ವಿ - ಹಜ್‌ ಸಮಿತಿ ಸಿಇಒ ಮಸೂದ್‌ ಅಹಮ್ಮದ್‌ ಖಾನ್‌

2021ಕ್ಕೆ ಹಜ್‌ ಯಾತ್ರಾರ್ಥಿಗಳನ್ನು ಅರ್ಜಿಗಳ ಸಂಬಂಧ ಕೆಲವೇ ತಿಂಗಳುಗಳಲ್ಲಿ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಕೇಂದ್ರ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ತಿಳಿಸಿದ್ದಾರೆ.

hajj-2021-application-process-to-start-soon-naqvi
ಶೀಘ್ರದಲ್ಲೇ 2021ರ ಹಜ್ ಯಾತ್ರೆಯ‌ ಅರ್ಜಿಗಳ ಪ್ರಕ್ರಿಯೆ ಆರಂಭ : ಸಚಿವ ನಖ್ವಿ

By

Published : Sep 26, 2020, 5:14 PM IST

ನವದೆಹಲಿ: 2021ರ ಹಜ್ ಯಾತ್ರೆಯ ಪ್ರಕ್ರಿಯೆಗಳನ್ನು ಕೇಂದ್ರ ಸರ್ಕಾರ ಮುಂದಿನ ಕೆಲ ತಿಂಗಳಲ್ಲಿ ಆರಂಭಿಸುತ್ತದೆ ಎಂದು ಕೇಂದ್ರ ಅಲ್ಪ ಸಂಖ್ಯಾಂತ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ತಿಳಿಸಿದ್ದಾರೆ.

ಹಜ್‌ ಸಮಿತಿ ಹಾಗೂ ಭಾರತದ ಇತರೆ ಏಜೆನ್ಸಿಗಳು 2021ರ ಹಜ್‌ಗೆ ಅರ್ಜಿಗಳನ್ನು ನೀಡುವ ಪ್ರಕ್ರಿಯನ್ನು ಆರಂಭಿಸುತ್ತವೆ. ಇತರೆ ಸಿದ್ಧತೆಗಳು ಅಕ್ಟೋಬರ್/ನವೆಂಬರ್‌ನಲ್ಲಿ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಹಜ್‌ ಯಾತ್ರೆ ಸಂಬಂಧ ಸೌದಿ ಅರೇಬಿಯಾ ಸರ್ಕಾರ ಶೀಘ್ರದಲ್ಲೇ ಅಗತ್ಯವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಭಾರತದ ಏಜೆನ್ಸಿಗಳು ಸೌದಿ ಪ್ರಾಧಿಕಾರದೊಂದಿಗೆ ‌ಸಮನ್ವಯತೆ ಮಾಡಿಕೊಳ್ಳಲಿದ್ದಾರೆ ಎಂದು ನಖ್ವಿ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಈಟಿವಿ ಭಾರತ ಜೊತೆ ಮಾತನಾಡಿರುವ ಹಜ್‌ ಸಮಿತಿ ಸಿಇಒ ಮಸೂದ್‌ ಅಹಮ್ಮದ್‌ ಖಾನ್‌, ಅಲ್ಪ ಸಂಖ್ಯಾತರ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಅವರೊಂದಿಗೆ ಈ ಸಂಬಂಧ ಮುಂಬೈನಲ್ಲಿ ಸಭೆ ನಡೆದಿದೆ. ಭಾರತದ ಹಜ್‌ ಸಮಿತಿ ಮತ್ತು ಇತರೆ ಅಧಿಕಾರಿಗಳು 2021ರ ಹಜ್‌ ಯಾತ್ರೆಯಾಗಿ ಯೋಜನೆ ರೂಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸೌದಿ ಅರೇಬಿಯಾ ಸರ್ಕಾರದ ಮಾರ್ಗ ಸೂಚಿಗಳಿಗಾಗಿ ಕಾಯುತ್ತಿದ್ದೇವೆ. ಮಾರ್ಗ ಸೂಚಿ ಬಿಡುಗಡೆಯಾದ ನಂತರ ಅಕ್ಟೋಬರ್‌ 19ಕ್ಕೆ ಮತ್ತೊಂದು ಸಭೆ ನಡೆಸಿ ಯಾತ್ರಾರ್ಥಿಗಳನ್ನು ಕಳುಹಿಸುವ ಸಂಬಂಧದ ನಿಯಮಗಳ ಪಟ್ಟಿಯನ್ನು ಕಳುಹಿಸಿಕೊಡಲಾಗುವುದು ಎಂದಿದ್ದಾರೆ.

2020ರ ಹಜ್‌ ಯಾತ್ರೆ ಆಯ್ಕೆಯಾಗಿದ್ದ ಯತ್ರಾರ್ಥಿಗಳು ಮತ್ತೊಮ್ಮೆ ಫಾರಂಗಳನ್ನು ನೀಡಬೇಕು ಎಂದು ಅಲ್ಪ ಸಂಖ್ಯಾತ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಅಕ್ಟೋಬರ್‌ 4 ರಿಂದ ಹಜ್‌ ಯಾತ್ರೆ ಆರಂಭವಾಗಲಿದ್ದು, ಮೊದಲ ಹಂತದಲ್ಲಿ ಸ್ಥಳೀಯ 6 ಸಾವಿರ ಮಂದಿಗೆ ಅವಕಾಶ ನೀಡಲಾಗಿದೆ. ನವೆಂಬರ್‌ 1 ರಿಂದ ಇತರೆ ದೇಶಗಳ ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ನಿತ್ಯ 20 ಸಾವಿರ ಮಂದಿ ಭೇಟಿ ನೀಡಬಹುದಾಗಿದೆ ಎಂದು ಸೌದಿ ಸರ್ಕಾರ ಹೇಳಿದೆ.

ABOUT THE AUTHOR

...view details