ಕರ್ನಾಟಕ

karnataka

ETV Bharat / bharat

ಗಮನಿಸಿ: ಹಜ್​ ಯಾತ್ರೆ ರದ್ದುಗೊಳಿಸಲು ಇಚ್ಚಿಸುವವರು ಮರು ಪಾವತಿಗೆ ಅರ್ಜಿ ಸಲ್ಲಿಸಲು ಸೂಚನೆ - ಹಜ್ ಯಾತ್ರಾರ್ಥಿಗಳಿಗೆ ಮರುಪಾತಿಗೆ ಅರ್ಜಿ ಸಲ್ಲಿಸಲು ಸೂಚನೆ

ಈ ಬಾರಿಯ ಹಜ್​ ಯಾತ್ರೆಯ ಕುರಿತು ಸೌದಿ ಅರೇಬಿಯಾ ಅಧಿಕಾರಿಗಳು ಇದುವರೆಗೆ ಯಾವುದೇ ಮಾಹಿತಿ ನೀಡದ ಕಾರಣ ಹಜ್​ ಯಾತ್ರೆ ರದ್ದುಗೊಳಿಸಲು ಇಚ್ಚಿಸುವವರು ಮರುಪಾವತಿಗೆ ಅರ್ಜಿ ಸಲ್ಲಿಸುವಂತೆ ಜಮ್ಮು ಕಾಶ್ಮೀರ ಹಜ್ ಸಮಿತಿ ಯಾತ್ರಾರ್ಥಿಗಳಿಗೆ ಸೂಚಿಸಿದೆ.

J-K Haj Committee asks pilgrims to apply for refund
ಹಜ್ ಯಾತ್ರಾರ್ಥಿಗಳಿಗೆ ಮರುಪಾತಿಗೆ ಅರ್ಜಿ ಸಲ್ಲಿಸಲು ಸೂಚನೆ

By

Published : Jun 8, 2020, 8:17 AM IST

ಶ್ರೀನಗರ : ಈ ವರ್ಷದ ಹಜ್​ ಯಾತ್ರೆಯನ್ನು ರದ್ದುಗೊಳಿಸಲು ಇಚ್ಚಿಸುವವರು ಮರುಪಾವತಿಗೆ ಅರ್ಜಿ ಸಲ್ಲಿಸುವಂತೆ ಜಮ್ಮು ಕಾಶ್ಮೀರ ಹಜ್​ ಸಮಿತಿಯ ಅಧಿಕಾರಿಗಳು ಸೂಚಿಸಿದ್ದಾರೆ.

ಹಜ್​ ಕಮಿಟಿ ಆಫ್​ ಇಂಡಿಯಾದ ವೆಬ್​​​​​ಸೈಟ್​ ಅಥವಾ ಬೆಮಿನಾದ ಹಜ್​ ಹೌಸ್​ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಿದರೆ ಶೇ.100 ಮರು ಪಾವತಿ ಮಾಡಲಾಗುವುದು ಎಂದು ಜೂನ್​ 5 ರಂದು ರಾಜ್ಯ ಹಜ್​ ಸಮಿತಿ ತಿಳಿಸಿದೆ.

ಭಾರದಲ್ಲಿ ಹಜ್​ ಯಾತ್ರೆಗೆ ಸಿದ್ದತೆ ಆರಂಭಿಸಲು ಇನ್ನು ಕೆಲವೇ ವಾರಗಳು ಬಾಕಿಯಿದೆ. ಕೋವಿಡ್​ ಕಾರಣದಿಂದ ಈ ವರ್ಷ ಹಜ್​ ನಡೆಯುತ್ತದೋ ಇಲ್ಲವೋ ಎಂಬುವುದರ ಬಗ್ಗೆ ಸೌದಿ ಅರೇಬಿಯಾದಿಂದ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ಸುತ್ತೋಲೆ ಅನುಸರಿಸಿ ಭಾರತೀಯ ಹಜ್​ ಸಮಿತಿ ಈ ನಿರ್ಧಾರ ಕೈಗೊಂಡಿದೆ.

ಮರು ಪಾವತಿಗೆ ಇಚ್ಚಿಸುವವರು ತಮ್ಮ ಬ್ಯಾಂಕ್ ಪಾಸ್​ ಬುಕ್​ನ ಮೊದಲ ಪುಟದ ಫೋಟೊ ಕಾಪಿ ಅಥವಾ ಚೆಕ್​ ಬುಕ್​ನ ಕವರ್​ ಪೇಜ್​ ಪ್ರತಿ ಅರ್ಜಿಯೊಂದಿಗೆ ಸಲ್ಲಿಸುವಂತೆ ಹಜ್​ ಸಮಿತಿ ಸೂಚಿಸಿದೆ.

ABOUT THE AUTHOR

...view details