ನವದೆಹಲಿ: ಕಾನೂನು ಬಾಹಿರ ಚಟುವಟಿಕೆ ಮಸೂದೆ ತಿದ್ದುಪಡಿಯ ನಂತರ ಮಸೂದ್ ಅಜರ್, ದಾವೂದ್ ಇಬ್ರಾಹಿಂ, ಹಫೀಜ್ ಸೈಯಿದ್ ಮತ್ತು ಜಾಕಿ ಉರ್ ರೆಹಮಾನ್ರನ್ನ ಉಗ್ರರು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಹಫೀಜ್ ಸಯೀದ್, ದಾವೂದ್ ಸೇರಿ ನಾಲ್ವರನ್ನ ಉಗ್ರರೆಂದು ಘೋಷಣೆ - ದಾವೂದ್ ಇಬ್ರಾಹಿಂ
ಮಸೂದ್ ಅಜರ್, ದಾವೂರ್ ಇಬ್ರಾಹಿಂ, ಹಫೀಜ್ ಸೈಯಿದ್ ಮತ್ತು ಜಾಕಿರ್ ಉರ್ ರೆಹಮಾನ್ ಉಗ್ರರು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಹಫೀಸ್ ಸಯೀದ್
ಈ ಬಗ್ಗೆ ನೋಟಿಸ್ ಹೊರಡಿಸಿರುವ ಕೇಂದ್ರ ಗೃಹ ಇಲಾಖೆ ಈ ನಾಲ್ವರನ್ನ ಉಗ್ರರು ಎಂದು ಘೋಷಣೆ ಮಾಡಿದೆ. ಕಾನೂನು ಬಾಹಿರ ಚಟುವಟಿಕೆ(ತಡೆಗಟ್ಟುವ) ಕಾಯ್ದೆಗೆ ತಿದ್ದುಪಡಿ ತಂದ ನಂತರ ಈ ಘೋಷಣೆ ಮಾಡಲಾಗಿದೆ. ಈ ತಿದ್ದುಪಡಿಯಿಂದ ಸರ್ಕಾರಕ್ಕೆ ಒಬ್ಬ ವ್ಯಕ್ತಿಯನ್ನ ಭಯೋತ್ಪಾದಕ ಎಂದು ಘೋಷಣೆ ಮಾಡುವ ಅಧಿಕಾರ ನೀಡಿಲಾಗಿದೆ.
2008ರ ಮುಂಬೈ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಇತ್ತೀಚಿನ ಪುಲ್ವಾಮಾ ದಾಳಿ ಮತ್ತು 2001ರ ಸಂಸತ್ತಿನ ಮೇಲೆ ನಡೆದ ದಾಳಿ ಹಿಂದೆ ಈತನ ಕೈವಾಡವಿದೆ ಎಂದು ಹೇಳಲಾಗುತ್ತಿದೆ.