ಕರ್ನಾಟಕ

karnataka

ETV Bharat / bharat

ಮಂಗಳೂರಿನ ಗಲಭೆಗೆ ಕೇರಳಿಗರು ಕಾರಣವಲ್ಲ ಎಂದ ಎಚ್​ಡಿ ದೇವೇಗೌಡ.. ಹಾಗಿದ್ರೆ ಯಾರು ಕಾರಣ? - ಎಚ್​ಡಿ ದೇವೇಗೌಡ

ಮಂಗಳೂರಿನ ಗಲಭೆಗೆ ಕೇರಳ ರಾಜ್ಯದವರು ಕಾರಣ ಎಂಬುದು ಬಿಜೆಪಿಯ ಕೆಟ್ಟ ನಿರ್ಧಾರ. ಬಹಳಷ್ಟು ಕೇರಳಿಗರು ಈ ಭಾಗದಲ್ಲಿ ವಾಸಿಸುತ್ತಿದ್ದಾರೆ. ಈ ಗಲಭೆಗೆ ಅವರು ಕಾರಣವೆಂಬುದು 1 ಪ್ರತಿಶತದಷ್ಟೂ ಉರುಳಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಮಂಗಳೂರು, ಉಡುಪಿಯಲ್ಲಿ ಇಂತಹ ಸಮಸ್ಯೆ ಸೃಷ್ಟಿಯಾಗುವುದು ಸಾಮಾನ್ಯವಾಗಿದೆ. ಈಗ ನಡೆದ ಗಲಭೆಗೂ ಅವರೇ ಕಾರಣ ಎಂದು ದೇವೇಗೌಡ ಆಪಾದಿಸಿದರು.

JDS leader H D Devegowda
ಎಚ್​ಡಿ ದೇವೇಗೌಡ

By

Published : Dec 28, 2019, 7:54 PM IST

Updated : Dec 28, 2019, 8:26 PM IST

ತಿರುವನಂತಪುರ: ಸಿಎಎ ಜಾರಿಗೆ ತರುತ್ತೇವೆ ಎನ್ನುತ್ತಿರುವ ಬಿಜೆಪಿ ನಿರ್ಧಾರಕ್ಕೆ ದೇಶದ 13 ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಎಚ್​.ಡಿ. ದೇವೇಗೌಡ ಹೇಳಿದರು.

ಕೇರಳದಲ್ಲಿ 'ಈ ಟಿವಿ ಭಾರತ್​' ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಸಿಎಎ ಜಾರಿಯ ಬಗ್ಗೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ, ರಾಜಸ್ಥಾನ, ಕೇರಳ, ಮಧ್ಯಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಜೆಡಿಎಸ್​ ಕೂಡ ಇದಕ್ಕೆ ಬೆಂಬಲ ನೀಡುವುದಿಲ್ಲ ಎಂದರು.

ನಲವತ್ತು ವರ್ಷದಿಂದ ಪ್ರಾದೇಶಿಕ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಸಾಕಷ್ಟು ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. ಆರಂಭಿಕ ದಿನಗಳಿಂದ ಕಾಂಗ್ರೆಸ್​ ಮತ್ತು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳ ವಿರುದ್ಧ ಅವಿರತ ಹೋರಾಟ ನಡೆಸಿದ್ದೇನೆ. ಮುಂದಿಯೂ ನಮ್ಮ ಹೋರಾಟ ಹೀಗೆ ಮುಂದುವರಿಯುತ್ತದೆ. ಇದರಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ. ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ ಎಂದರು.

'ಈಟಿವಿ ಭಾರತ್​' ಜೊತೆಗೆ ಮಾತನಾಡಿದ ಜೆಡಿಎಸ್​ ವರಿಷ್ಠ ದೇವೇಗೌಡ

ಮಂಗಳೂರಿನ ಗಲಭೆಗೆ ಕೇರಳ ರಾಜ್ಯದವರು ಕಾರಣವೆಂಬುದು ಬಿಜೆಪಿಯ ಕೆಟ್ಟ ನಿರ್ಧಾರ. ಬಹಳಷ್ಟು ಕೇರಳಿಗರು ಈ ಭಾಗದಲ್ಲಿ ವಾಸಿಸುತ್ತಿದ್ದಾರೆ. ಈ ಗಲಭೆಗೆ ಅವರು ಕಾರಣವೆಂಬುದು 1 ಪ್ರತಿಶತದಷ್ಟೂ ಉರುಳಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಮಂಗಳೂರು, ಉಡುಪಿಯಲ್ಲಿ ಇಂತಹ ಸಮಸ್ಯೆ ಸೃಷ್ಟಿಯಾಗುವುದು ಸಾಮಾನ್ಯವಾಗಿದೆ. ಈಗ ನಡೆದ ಗಲಭೆಗೂ ಅವರೇ ಕಾರಣ ಎಂದು ಆಪಾದಿಸಿದರು.

Last Updated : Dec 28, 2019, 8:26 PM IST

ABOUT THE AUTHOR

...view details