ಕರ್ನಾಟಕ

karnataka

By

Published : Nov 20, 2020, 8:19 PM IST

ETV Bharat / bharat

ಶಾಲಾ ಬಾಲಕಿಯರಿಗೆ ಸ್ವರಕ್ಷಣೆ ತರಬೇತಿ ನೀಡಿ: ಪ್ರಧಾನಿಗೆ ವಿದ್ಯಾರ್ಥಿನಿಯ ಪತ್ರ

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು, ಮಹಿಳೆಯರನ್ನು ಸ್ವರಕ್ಷಣೆ ಮಾಡಲು ಅವರಿಗೆ ತರಬೇತಿಯನ್ನು ನೀಡುವಂತೆ ಕೋರಿ ಗುವಾಹಟಿಯ ಪಾಂಡು ಪ್ರದೇಶದ 15 ವರ್ಷದ ಮೀನಾಕ್ಷಿ ಸಿಂಘಾ ಎಂಬ ಬಾಲಕಿ ಪ್ರಧಾನಿಗೆ ಪತ್ರ ಬರೆದಿದ್ದಾಳೆ.

ಮೀನಾಕ್ಷಿ ಸಿಂಘಾ
ಮೀನಾಕ್ಷಿ ಸಿಂಘಾ

ಗುವಾಹಟಿ:ದೇಶಾದ್ಯಂತ ಮಹಿಳೆಯರ ಮೇಲಿನ ಹಲ್ಲೆ ಮತ್ತು ಹಿಂಸಾಚಾರದ ಪ್ರಕರಣದಿಂದ ವಿಚಲಿತಳಾದ ಅಸ್ಸಾಂನ ಬಾಲಕಿಯೊಬ್ಬಳು ದೇಶಾದ್ಯಂತ ಶಾಲೆಗಳಲ್ಲಿ ಬಾಲಕಿಯರಿಗೆ ಉಚಿತ ಸ್ವರಕ್ಷಣೆ ತರಬೇತಿಯನ್ನು ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾಳೆ.

ಗುವಾಹಟಿಯ ಪಾಂಡು ಪ್ರದೇಶದ ನ್ಯೂ ಕಾಲೋನಿ ನಿವಾಸಿ 15 ವರ್ಷದ ಮೀನಾಕ್ಷಿ ಸಿಂಘಾ ಅವಳು ನವೆಂಬರ್ 18 ರಂದು ಪ್ರಧಾನಿಗೆ ಪತ್ರ ಬರೆದಿದ್ದಾಳೆ. ಪ್ರಾಗ್ಜೋತಿಶ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿರುವ ಈಕೆ ವುಶು ಅಥ್ಲೆಟಿಕ್ ಕೂಡ ಹೌದು.

ಪಿಎಂ ಮೋದಿಗೆ ಬಾಲಕಿ ಮೀನಾಕ್ಷಿ ಬರೆದ ಪತ್ರ

"ಸರ್ ಇಂದು ನಾನು ಸ್ವಲ್ಪ ಸಮಯದವರೆಗೆ ಯೋಚಿಸುತ್ತಿದ್ದ ವಿಷಯದ ಬಗ್ಗೆ ಹೇಳಲು ಬಯಸುತ್ತೇನೆ. ಮಹಿಳೆಯರ ಮೇಲೆ ಹಲ್ಲೆ ಮತ್ತು ಹಿಂಸಾಚಾರದ ಪ್ರಕರಣಗಳು ಹೆಚ್ಚುತ್ತಿರುವ ಸಮಯದಲ್ಲಿ, ಹುಡುಗಿಯರಿಗೆ ಉಚಿತ ಸ್ವರಕ್ಷಣೆ ತರಬೇತಿಯನ್ನು ನೀಡಲು ನಾನು ವಿನಂತಿಸುತ್ತಿದ್ದೇನೆ. ಶಾಲಾ ಮಕ್ಕಳು, ವಿಶೇಷವಾಗಿ ಬಾಲಕಿಯರಿಗೆ ಆತ್ಮರಕ್ಷಣೆಯ ಬಗ್ಗೆ ಕಲಿಸಿ. ಇದು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ ಮತ್ತು ಅಗತ್ಯ ಸಮಯದಲ್ಲಿ ಅವರನ್ನು ರಕ್ಷಿಸುತ್ತದೆ ” ಎಂದು ಮೀನಾಕ್ಷಿ ತನ್ನ ಪತ್ರದಲ್ಲಿ ಬರೆದಿದ್ದಾಳೆ.

ಪ್ರಧಾನಿಗೆ ಬಾಲಕಿ ಬರೆದ ಪತ್ರದ ಪ್ರತಿ

"ಸರ್, ನಾನು ಮಾಲಿಗಾಂವ್ ವುಶು ತರಬೇತಿ ಕೇಂದ್ರದ ವುಶು ಅಥ್ಲೆಟಿಕ್ ಆಗಿದ್ದೇನೆ ಮತ್ತು ನನ್ನ ಮಾಸ್ಟರ್ ಸಿಜು ಗೋಪಿ ಸಿಂಘ್ ಲಾಮಾ ಅವರ ಮಾರ್ಗದರ್ಶನದಲ್ಲಿ ಕಳೆದ ಒಂದು ವರ್ಷದಿಂದ ನನ್ನ ಪ್ರದೇಶದಲ್ಲಿ ಪ್ರತಿ ಭಾನುವಾರ ಬಾಲಕಿಯರಿಗೆ ಉಚಿತ ಸ್ವರಕ್ಷಣೆ ತರಬೇತಿಯನ್ನು ಆಯೋಜಿಸುತ್ತೇನೆ" ಎಂದು ಅವಳು ಹೇಳಿದ್ದಾಳೆ.

ABOUT THE AUTHOR

...view details