ಕರ್ನಾಟಕ

karnataka

ETV Bharat / bharat

SUV ಕಾರು ಕದಿಯುವ ಯತ್ನ: ಯುವತಿ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು! - ಎಸ್ಯುವಿ​​ ಕಾರು ಕದಿಯುವ ಯತ್ನ

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವತಿ ಮೇಲೆ ಗುಂಡಿನ ದಾಳಿ ನಡೆಸಿರುವ ದುಷ್ಕರ್ಮಿಗಳು, ವಾಹನ ಕದಿಯುವ ಯತ್ನ ನಡೆಸಿರುವ ಘಟನೆ ನಡೆದಿದೆ.

Gurugram woman shot
Gurugram woman shot

By

Published : Nov 4, 2020, 6:55 PM IST

ಗುರುಗ್ರಾಮ್​:ಎಸ್​ಯುವಿ ಕಾರು ಕದಿಯುವ ಯತ್ನದಲ್ಲಿ 28 ವರ್ಷದ ಯುವತಿಯೊಬ್ಬಳ ಮೇಲೆ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿರುವ ಘಟನೆ ನಡೆದಿದ್ದು, ಸದ್ಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮಂಗಳವಾರ ರಾತ್ರಿ 11:15ರ ಸುಮಾರಿಗೆ ಸೆಕ್ಟರ್​​ 65ರ ಬಳಿ ತನ್ನ ಸ್ನೇಹಿತನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ಬೈಕ್​ನಲ್ಲಿ ಬಂದ ಮೂವರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೂವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್​ 307(ಕೊಲೆ ಯತ್ನ, 25(1-ಬಿ) ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ವಿವಿಧ ಪ್ರಕರಣದಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ.

ಯುವತಿ ಪೂಜಾ ಶರ್ಮಾ ಹಾಗೂ ಸ್ನೇಹಿತ ಸಾಗರ್​ ಮಂಚಂದಾ(29) ಹರಿದ್ವಾರದವರಾಗಿದ್ದು, ಸದ್ಯ ಗುರುಗ್ರಾಮ್​ನ ಸೆಕ್ಟರ್​ 40ರಲ್ಲಿ ವಾಸವಾಗಿದ್ದಾರೆ. ಇಬ್ಬರು ವಿಪ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ರಾತ್ರಿ 8 ಗಂಟೆಗೆ ಊಟ ಮಾಡಿದ ಬಳಿಕ ಕಾರಿನಲ್ಲಿ ದೆಹಲಿ-ಜೈಪುರ ಹೆದ್ದಾರಿಯಲ್ಲಿ ತೆರಳಿದ್ದರು. ಈ ವೇಳೆ ಪೂಜಾ ಕಾರು ಚಾಲನೆ ಮಾಡುತ್ತಿದ್ದರು.

ಈ ವೇಳೆ ಬೈಕ್​ನಲ್ಲಿ ಬಂದ ಮೂವರು ಮುಖವಾಡ ಧರಿಸಿದ್ದರು. ಈ ವೇಳೆ ಅವರು ನಮಗೆ ಬಂದೂಕು ತೋರಿಸಿ, ಕಾರಿನ ಗ್ಲಾಸ್ ಕೆಳಗೆ ಇಳಿಸುವಂತೆ ಸೂಚನೆ ನೀಡಿದರು. ಇದಕ್ಕೆ ಒಪ್ಪದಿದ್ದಾಗ ಗುಂಡು ಹಾರಿಸಿದ್ದಾರೆ ಎಂದು ಸಾಗರ್ ಮಾಹಿತಿ ನೀಡಿದ್ದಾರೆ. ತಡರಾತ್ರಿ ಆಗಿದ್ದ ಕಾರಣ ಇವರ ಗುರುತು ಸಿಕ್ಕಿಲ್ಲ ಎಂದಿದ್ದಾರೆ.

ABOUT THE AUTHOR

...view details