ಗುರಗ್ರಾಮ್(ಹರಿಯಾಣ):ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಅತೀ ಹೆಚ್ಚು ಸವಾಲು ಎದುರಿಸುತ್ತಿರುವವರು ಆರೋಗ್ಯ ಇಲಾಖೆ ಸಿಬ್ಬಂದಿ. ಈ ಹಿನ್ನೆಲೆ ಹರಿಯಾಣದ ಗುರುಗ್ರಾಮ್ ನ ಸಿವಿಲ್ ಆಸ್ಪತ್ರೆಯು ವಿನೂತನ ಪ್ರಯೋಗವೊಂದನ್ನು ಮಾಡಿದೆ.
ಕೋವಿಡ್ -19 ಹೋರಾಟದಲ್ಲಿ ವೈದ್ಯರಿಗೆ ಸಹಾಯ ಮಾಡಲಿದೆ ಹ್ಯುಮನಾಯ್ಡ್ ರೋಬೋಟ್ - ಹರಿಯಾಣದ ಗುರುಗ್ರಾಮ್ ಸಿವಿಲ್ ಆಸ್ಪತ್ರೆ
ಹರಿಯಾಣದ ಗುರುಗ್ರಾಮ್ ಸಿವಿಲ್ ಆಸ್ಪತ್ರೆ ಕೋವಿಡ್-19 ನೊಂದಿಗೆ ಹೋರಾಡಲು ಹ್ಯುಮನಾಯ್ಡ್ ರೋಬೋಟ್ ಅನ್ನು ಬಳಸುತ್ತಿದೆ. ಇದು ಕೊರೊನಾ ವೈರಸ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರಿಗೆ ಸಹಾಯ ಮಾಡುವ ನಿರೀಕ್ಷೆಯಿದೆ.
ಹರಿಯಾಣದ ಗುರುಗ್ರಾಮ್ ಸಿವಿಲ್ ಆಸ್ಪತ್ರೆ ಕೋವಿಡ್-19 ನೊಂದಿಗೆ ಹೋರಾಡಲು ಹ್ಯುಮನಾಯ್ಡ್ ರೋಬೋಟ್ ಅನ್ನು ಬಳಸುತ್ತಿದೆ. ಇದು ಆರೋಗ್ಯ ವಿಭಾಗದಲ್ಲಿ ರಾಜ್ಯದಲ್ಲೇ ಮೊದಲ ಪ್ರಯೋಗವೆನಿಸಿದೆ. ಇದನ್ನು ಹೈಟೆಕ್ ರೊಬೊಟಿಕ್ಸ್ಎಂಬ ಖಾಸಗಿ ಕಂಪನಿ ಸಂಸ್ಥೆ ಅಭಿವೃದ್ಧಿಪಡಿಸಿದೆ. ಒಮ್ಮೆ ಚಾರ್ಜ್ ಮಾಡಿದ ರೋಬೋಟ್ ಸುಮಾರು 10 ಗಂಟೆಗಳವರೆಗೆ ಕೆಲಸ ಮಾಡಬಲ್ಲದು ಹಾಗೇ ಒಂದು ಸಮಯದಲ್ಲಿ ಐದು ಆಜ್ಞೆಗಳನ್ನು ತೆಗೆದುಕೊಳ್ಳಬಹುದು.
ಆಸ್ಪತ್ರೆಗೆ ಉಚಿತವಾಗಿ ಒದಗಿಸಲಾದ ರೋಬೋಟ್ ಅನ್ನು ವಾರ್ಡ್‌ನಲ್ಲಿ ದಾಖಲಾದ ರೋಗಿಗಳಿಗೆ ಆಹಾರ ಮತ್ತು ಔಷಧಿ ವಿತರಿಸಲು ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ನಿಯೋಜಿಸಲಾಗಿದೆ. ಜೊತೆಗೆ ಕೊರೊನಾ ವೈರಸ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವಾಗಲೂ ರೋಬೋಟ್ ವೈದ್ಯರಿಗೆ ಸಹಾಯ ಮಾಡುವ ನಿರೀಕ್ಷೆಯಿದೆ.