ಗುರುಗ್ರಾಮ್: ಹೈದರಾಬಾದ್ ಮೂಲದ ಪದವೀಧರನೊಬ್ಬ ಹೆಂಡತಿ ಮತ್ತು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣ ರಾಜ್ಯದ ಗುರುಗ್ರಾಮದಲ್ಲಿ ನಡೆದಿದೆ. ಪ್ರಕಾಶ್ ಸಿಂಗ್ (55), ಪತ್ನಿ ಸೋನು ಸಿಂಗ್ (50), ಮಕ್ಕಳಾದ ಆದಿತಿ (22) ಮತ್ತು ಮಗ ಆದಿತ್ಯ (13) ಎಂಬುವರ ಕತ್ತು ಸೀಳಿ ತಾನು ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪತ್ನಿ- ಮಕ್ಕಳ ಕತ್ತು ಕೊಯ್ದು ತಾನೂ ಆತ್ಮಹತ್ಯೆ ಮಾಡಿಕೊಂಡ ಪದವೀಧರ! - news kannada
ಡಾಕ್ಟರೇಟ್ ಪಡೆದ ಪದವೀಧರನೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಕತ್ತು ಕೊಯ್ದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆ
ಮನೆ ಬಾಗಿಲು ತೆರೆಯದಿದ್ದಾಗ ಅನುಮಾನ ಬಂದಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಕೊಂಡಿ ಹಾಕಿದ ಬಾಗಿಲು ಮುರಿದು ಒಳ ನುಗ್ಗಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೃತದೇಹದ ಪಕ್ಕ ಚೀಟಿಯೊಂದು ಸಿಕ್ಕಿದ್ದು, ಕೌಟುಂಬಿಕ ಕಾರಣದಿಂದ ಪ್ರಕಾಶ್ ಸಿಂಗ್ ಈ ರೀತಿ ಮಾಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ಕೊಟ್ಟಿದ್ದಾರೆ. ಮೃತನ ಪತ್ನಿಯೂ ಗುರುಗಾಂವ್ನಲ್ಲಿಯೇ ಶಾಲೆಯೊಂದನ್ನು ನಡೆಸುತ್ತಿದ್ದಳು. ಪ್ರಕಾಶ್ ಸಹ ಕಳೆದ 8 ವರ್ಷದಿಂದ ಗುರುಗ್ರಾಮದಲ್ಲಿ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ.
Last Updated : Jul 2, 2019, 4:22 PM IST