ಶ್ರೀನಗರ ( ಜಮ್ಮು ಮತ್ತು ಕಾಶ್ಮೀರ ): ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಸೋಮವಾರ ಬೆಳಗ್ಗೆ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಪ್ವಾರಾದ ಮಚಿಲ್ ಸೆಕ್ಟರ್ನಲ್ಲಿ ಎಲ್‌ಒಸಿ ಉದ್ದಕ್ಕೂ ನವೆಂಬರ್ 22 ಮತ್ತು 23 ರ ಮಧ್ಯರಾತ್ರಿಯಲ್ಲಿ ಕೆಲವು ಶಂಕಿತರ ಚಲನೆ ಕಂಡು ಬಂದಿದ್ದನ್ನು ಭದ್ರತಾ ಪಡೆ (ಬಿಎಸ್‌ಎಫ್) ಸೈನಿಕರು ಗಮನಿಸಿದ್ದರು. ಸೈನಿಕರು ಅನುಮಾನಾಸ್ಪದ ಓಡಾಡುತ್ತಿದ್ದ ಉಗ್ರರ ಮೇಲೆ ಗುಂಡು ಹಾರಿಸಿದರು. ಈ ವೇಳೆ ಪ್ರತಿ ದಾಳಿ ಕೂಡ ನಡೆಯಿತು ಎಂದು ಬಿಎಸ್ಎಫ್ನ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಆರ್ ಮುತ್ತು ಕೃಷ್ಣನ್ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ.