ನವದೆಹಲಿ:ಕಿರಿಯ ವಯಸ್ಸಿನಲ್ಲೆ 190 ಸೆಂ.ಮೀ ಉದ್ದದಷ್ಟು ಕೂದಲು ಬೆಳೆಸಿ ಗುಜರಾತ್ ಮೂಲದ 17 ವರ್ಷದ ಬಾಲಕಿ ನೀಲಂಶಿ ಪಟೇಲ್ ಗಿನ್ನೆಸ್ ದಾಖಲೆ ಬರೆದಿದ್ದಾಳೆ.
ರಾಪುಂಜೆಲ್ ಎಂದು ಕರೆಯಲ್ಪಡುವ ನೀಲಂಶಿ ಈ ಮೊದಲು 2018 ರ ನವೆಂಬರ್ 21 ರಂದು 170 ಸೆಂಟಿಮೀಟರ್ ಉದ್ದದ ಕೂದಲಿನೊಂದಿಗೆ ದಾಖಲೆ ನಿರ್ಮಿಸಿದ್ದರು. ಇದೀಗ 190 ಸೆಂಟಿಮೀಟರ್ನಷ್ಟು ಉದ್ದದ ಕೂದಲಿನ ಮೂಲಕ ತನ್ನದೇ ದಾಖಲೆ ಮುರಿದಿದ್ದಾಳೆ. ನಾನು ನನ್ನ ಕೂದಲನ್ನು ಪ್ರೀತಿಸುತ್ತೇನೆ, ಕೂದಲನ್ನು ಕತ್ತರಿಸಬೇಕೆಂದು ನಾನು ಎಂದಿಗೂ ಬಯಸುವುದಿಲ್ಲ. ಗಿನ್ನೆಸ್ ಪುಸ್ತಕದ ದಾಖಲೆಯಲ್ಲಿ ನನ್ನ ಹೆಸರು ಇರಬೇಕೆಂಬುದು ನನ್ನ ತಾಯಿಯ ಕನಸಾಗಿತ್ತು ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾಳೆ.