ಅಹಮದಾಬಾದ್(ಗುಜರಾತ್): ನಾಳೆ ಭಾರತಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿ ನೀಡುವ ಹಿನ್ನೆಲೆ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಸೂಚನೆಯೊಂದನ್ನು ನೀಡಿವೆ.
ನಾಳೆ ಭಾರತಕ್ಕೆ ಟ್ರಂಪ್ ಭೇಟಿ: ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ನೀಡಿದ ಮುಖ್ಯ ಸೂಚನೆ ಏನ್ ಗೊತ್ತಾ? - ನಾಳೆ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ
ವಿಸ್ಟಾರ, ಇಂಡಿಗೊ ಮತ್ತು ಸ್ಪೈಸ್ ಜೆಟ್ ವಿಮಾನದಲ್ಲಿ ಅಹಮದಾಬಾದ್ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಪ್ರಯಾಣಿಕರು ಬೇಗನೆ ನಿಲ್ದಾಣಕ್ಕೆ ಬರುವಂತೆ ಸೂಚನೆ ನೀಡಿವೆ.
ವಿಸ್ಟಾರ, ಇಂಡಿಗೊ, ಮತ್ತು ಸ್ಪೈಸ್‌ಜೆಟ್ ವಿಮಾನ
ವಿಸ್ಟಾರ, ಇಂಡಿಗೊ, ಮತ್ತು ಸ್ಪೈಸ್‌ಜೆಟ್ ವಿಮಾನಗಳಲ್ಲಿ ಅಹಮದಾಬಾದ್ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಪ್ರಯಾಣಿಕರು ಬೇಗನೆ ನಿಲ್ದಾಣಕ್ಕೆ ಬರಲು ಸೂಚನೆ ನೀಡಿವೆ.
ಡೊನಾಲ್ಡ್ ಟ್ರಂಪ್ ಅವರ ಭೇಟಿಯ ಹಿನ್ನೆಲೆ ನಾಳೆ ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಸಂಚಾರ ದಟ್ಟಣೆ ಆಗಲಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಈ ಸೂಚನೆ ನೀಡಿವೆ.