ಜೋಧಪುರ್(ರಾಜಸ್ಥಾನ):ಮೂರು ವರ್ಷದ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ಹೊರಹಾಕಿದ್ದು, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಹಾಕಿದೆ.
ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ: ಆರೋಪಿಗೆ ಗಲ್ಲು ಶಿಕ್ಷೆ - ಮೂರು ವರ್ಷದ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ
ಕಳೆದ ವರ್ಷ ಅಕ್ಟೋಬರ್ 14ರಂದು ನಡೆದಿದ್ದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಗುಜರಾತ್ ಹೈಕೋರ್ಟ್ ಆದೇಶ ಹೊರಹಾಕಿದೆ.
ಮೂರು ವರ್ಷದ ಬಾಲಕಿ ರೇಪ್ & ಮರ್ಡರ್ ಕೇಸ್
ಬಿಹಾರದ ಬಕ್ಸರ್ ಜಿಲ್ಲೆಯ ಅನಿಲ್ ಯಾದವ್ ಕೆಲಸಕ್ಕಾಗಿ ರಾಜಸ್ಥಾನದ ಸೂರತ್ಗೆ ಆಗಮಿಸಿದ್ದ. ಈ ವೇಳೆ ತಾನು ವಾಸವಾಗಿದ್ದ ಮನೆಯ ಪಕ್ಕದಲ್ಲಿದ್ದ ಬಾಲಕಿ ಮೇಲೆ ದುಷ್ಕೃತ್ಯ ಮೆರೆದಿದ್ದ.
ಬಾಲಕಿ ಅಪಹರಣ ಮಾಡಿ ತನ್ನ ರೂಂನಲ್ಲಿ ಕೂಡಿ ಹಾಕಿದ್ದ ಕಾಮುಕ ರಾತ್ರಿ ಇಡಿ ಆಕೆಯ ಮೇಲೆ ದುಷ್ಕೃತ್ಯ ಮೆರೆದಿದ್ದನು. ಇದಾದ ಬಳಿಕ ಆಕೆಯ ಕೊಲೆ ಮಾಡಿ ಅಲ್ಲಿಯೇ ಮುಚ್ಚಿ ಹಾಕಿದ್ದನು. ಇದಾದ ಬಳಿಕ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿತ್ತು. ಘಟನೆ ನಡೆಯುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದನು. ಆದರೆ ಆತನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
Last Updated : Dec 27, 2019, 3:26 PM IST