ಅಹಮದಾಬಾದ್:ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸರ್ಕಾರ ಸಾರ್ವಜನಿಕರಲ್ಲಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲು 'ನಾನೂ ಕೊರೊನಾ ಯೋಧ' ಎಂಬ ಅಭಿಯಾನವನ್ನು ಘೋಷಿಸಿದೆ.
ವಿಜಯ್ ರೂಪಾನಿ ಫೇಸ್ಬುಕ್ ಲೈವ್ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು. ಮೇ 21ರಿಂದ ಮೇ 27ರವರೆಗೆ ಈ ಅಭಿಯಾನ ನಡೆಯಲಿದೆ.

"ಕೊರೊನಾ ಸೋಂಕಿನ ವಿರುದ್ಧ ಎಲ್ಲರೂ ಒಗ್ಗೂಡಬೇಕು. ಇದನ್ನು ಜನರ ಯುದ್ಧವನ್ನಾಗಿ ಮಾಡಲು ಗುಜರಾತ್ ಜನರ ಸುರಕ್ಷತೆಗಾಗಿ 'ನಾನೂ ಕೊರೊನಾ ಯೋಧ' ಎಂಬ ಅಭಿಯಾನವನ್ನು ಪ್ರಾರಂಭಿಸುತ್ತಿದ್ದೇನೆ." ಎಂದು ಗುಜರಾತ್ ಸಿಎಂ ಹೇಳಿದರು.
ಈ ಸಂದರ್ಭದಲ್ಲಿ ಮೂರು ಪ್ರತಿಜ್ಞೆ ಕೈಗೊಳ್ಳುವಂತೆ ಅವರು ತಿಳಿಸಿದರು. ಅವುಗಳೆಂದರೆ:
ಗುಜರಾತ್ನಲ್ಲಿ 13,273 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. ಸಾವಿನ ಸಂಖ್ಯೆ 802ಕ್ಕೆ ತಲುಪಿದ್ದು, 5,880 ಮಂದಿ ಚೇತರಿಸಿಕೊಂಡಿದ್ದಾರೆ.