ಅಹಮದಾಬಾದ್(ಗುಜರಾತ್): ಕೋವಿಡ್ -19 ಮಹಾಮಾರಿಗೆ ಗುಜರಾತ್ ಕಾಂಗ್ರೆಸ್ ಮುಖಂಡ ಬದ್ರುದ್ದೀನ್ ಶೇಖ್ ನಿಧನ ಹೊಂದಿದ್ದಾರೆ ಎಂದು ಪಕ್ಷದ ನಾಯಕ ಶಕ್ತಿಶಿಂಹ್ ಗೋಹಿಲ್ ತಿಳಿಸಿದ್ದಾರೆ.
ಕೋವಿಡ್ -19 ಮಹಾಮಾರಿಗೆ ಗುಜರಾತ್ ಕಾಂಗ್ರೆಸ್ ಮುಖಂಡ ಬಲಿ - ಬದ್ರುದ್ದೀನ್ ಶೇಖ್
ಗುಜರಾತ್ ಕಾಂಗ್ರೆಸ್ ಮುಖಂಡ ಬದ್ರುದ್ದೀನ್ ಶೇಖ್ ಕೊರೊನಾ ವೈರಸ್ ಮಹಾಮಾರಿಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿ ಪಕ್ಷದ ನಾಯಕ ಶಕ್ತಿಶಿಂಹ್ ಗೋಹಿಲ್ ಟ್ವೀಟ್ ಮಾಡಿದ್ದಾರೆ.
"ಬದ್ರುಭಾಯ್, ಎಂದರೆ ಶಕ್ತಿ ಮತ್ತು ತಾಳ್ಮೆಯ ಸಲಾಕೆಯಿದ್ದಂತೆ. ಅವರ ಅಗಲಿಕೆಯಿಂದ ನನಗೆ ಮಾತೇ ಬರದಂತಾಗಿದೆ. ಇಂತ ನಾಯಕನನ್ನು ಕಳೆದುಕೊಂಡು ನಮ್ಮ ಗುಜರಾತ್ ಕಾಂಗ್ರೆಸ್ ಕುಟುಂಬಕ್ಕೆ ಆಘಾತವಾಗಿದೆ" ಎಂದು ಗೋಹಿಲ್ ಭಾನುವಾರ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ, ನನ್ನ ಸ್ನೇಹಿತ ಬದ್ರು ನಿಜವಾದ #ಕೊರೊನಾ ವಾರಿಯರ್. ಗುಜರಾತಿನ ಅಹಮದಾಬಾದ್ಲ್ಲಿ ಬಡವರಿಗೆ ಸಹಾಯ ಮಾಡುವಾಗ ಶೇಖ್ ಕೊರೊನಾ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಜನರು ಇನ್ನಾದರೂ ಸರ್ಕಾರದ ಆದೇಶಗಳನ್ನು ಪಾಲಿಸಿ ನಿಮ್ಮ ಪ್ರಾಣವನ್ನು ರಕ್ಷಿಸಿಕೊಂಡರೆ ಇಂತವರ ಸೇವೆ ತ್ಯಾಗಕ್ಕೆ ಅರ್ಥ ಬಂದಂತಾಗುತ್ತದೆ ಎಂದು ಅವರು ಬರೆದಿದ್ದಾರೆ.