ಸೂರತ್ (ಗುಜರಾತ್):ಹೈದರಾಬಾದ್ನ ಪಶುವೈದ್ಯೆ ದಿಶಾ(ಹೆಸರು ಬದಲಿಸಲಾಗಿದೆ) ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಅಮಾನವೀಯ ಕೊಲೆ ಪ್ರಕರಣದ ಆರೋಪಿಗಳನ್ನು ಬೇಟೆಯಾಡಿದ ತೆಲಂಗಾಣ ಪೊಲೀಸರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರ್ತಿದೆ. ದುಷ್ಟ ಸಂಹಾರ ಮಾಡಿದ ಪೊಲೀಸರ ಕಾರ್ಯವನ್ನು ಹೊಗಳಿದ ಇಲ್ಲಿನ ಉದ್ಯಮಿ ಪೊಲೀಸರ ಕ್ಷೇಮಾಭಿವೃದ್ದಿಗೆ ಒಂದು ಲಕ್ಷ ರೂ ಹಣ ನೀಡುವುದಾಗಿ ಘೋಷಿಸಿದ್ದಾರೆ.
ಹೈದರಾಬಾದ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ: ನಗದು ಬಹುಮಾನ ಘೋಷಿಸಿದ ಉದ್ಯಮಿ - ಹೈದರಾಬಾದ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳ ಮೇಲೆ ಹೈದರಾಬಾದ್ ಪೊಲೀಸರು ನಡೆಸಿದ ಎನ್ಕೌಂಟರ್ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಗುಜರಾತ್ ಮೂಲದ ಉದ್ಯಮಿಯೊಬ್ಬರು ತೆಲಂಗಾಣ ಪೊಲೀಸರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು ನಗದು ಬಹುಮಾನವನ್ನೂ ಘೋಷಿಸಿದ್ದಾರೆ.
ಹೈದರಾಬಾದ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಮಹವಾನಾ ರಾಜಾಭಾ ಎಂಬ ಕೈಗಾರಿಕೋದ್ಯಮಿ ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಹೈದರಾಬಾದ್ ಪೊಲೀಸ್ ಕಲ್ಯಾಣ ನಿಧಿಗೆ ಒಂದು ಲಕ್ಷ ರೂ ಹಣ ನೀಡಲು ನಿರ್ಧರಿಸಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ತೆಗೆದುಕೊಂಡಿರುವ ನಿರ್ಧಾರ ಹಾಗೂ ಭಾರತ ಸರ್ಕಾರದ ಮೇಲಿನ ಗೌರವದಿಂದ ತಾವು ನಿರ್ಧಾರ ತೆಗೆದುಕೊಂಡಿದ್ದು, ಖುದ್ದಾಗಿ ಹೈದರಾಬಾದ್ಗೆ ತೆರಳಿ ಪೊಲೀಸರನ್ನು ಸನ್ಮಾನಿಸುವುದಾಗಿ ಅವರು ಹೇಳಿದ್ರು.