ಕರ್ನಾಟಕ

karnataka

ETV Bharat / bharat

ಗುಡಿಸಲಲ್ಲಿ ಮಲಗಿದ್ದ ಬಾಲಕನನ್ನು ಎಳೆದೊಯ್ದ ಸಿಂಹಿಣಿ! - 5-year-old boy mauled to death by lioness in Gir

ಗುಜರಾತ್​ನ ಅಮ್ರೇಲಿ ಜಿಲ್ಲೆಯ ಗಿರ್ ಅರಣ್ಯ ಪ್ರದೇಶದಲ್ಲಿ ಸಿಂಹವೊಂದು ಬಾಲಕನನ್ನು ಗುಡಿಸಿಲಿನಿಂದ ಹೊತ್ತೊಯ್ದಿದ್ದು, ಅರಣ್ಯ ಪ್ರದೇಶದಲ್ಲಿ ಆತನ ದೇಹವನ್ನು ಭಾಗಶಃ ತಿಂದು ಮುಗಿಸಿದೆ.

lioness
ಸಿಂಹಿಣಿ

By

Published : Feb 4, 2020, 3:20 PM IST

ಅಮ್ರೇಲಿ(ಗುಜರಾತ್​):ಜಿಲ್ಲೆಯ ಗಿರ್ ಅರಣ್ಯ ಪ್ರದೇಶದಲ್ಲಿ ಐದು ವರ್ಷದ ಬಾಲಕನೋರ್ವನನ್ನು ಸಿಂಹಿಣಿಯೊಂದು ಕೊಂದು ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಮಧ್ಯರಾತ್ರಿ ಗಿರ್ ಅರಣ್ಯ ಪ್ರದೇಶದ ರಾಜುಲಾ ಸಮೀಪದಲ್ಲಿರುವ ಉಚೈಯಾ ಮತ್ತು ಭಚಾದರ್ ಗ್ರಾಮಗಳ ನಡುವೆ ಈ ಘಟನೆ ನಡೆದಿದೆ. ಸಿಂಹಿಣಿ ತನ್ನ ಮರಿಗಳೊಂದಿಗೆ ಅಲೆದಾಟ ನಡೆಸುತ್ತಿದ್ದು, ಈ ವೇಳೆ ಗುಡಿಸಲಲ್ಲಿ ಮಲಗಿದ್ದ ಬಾಲಕನನ್ನ ಎಳೆದೊಯ್ದಿದೆ ಎಂದು ತಿಳಿದುಬಂದಿದೆ.

ಗುಡಿಸಿಲಿನಿಂದ ಎಳೆದೊಯ್ದ ಬಾಲಕನನ್ನು ಸಿಂಹಿಣಿ ಮತ್ತು ಅದರ ಮರಿಗಳು ಸೇರಿ ಭಾಗಶಃ ದೇಹವನ್ನು ತಿಂದು ಮುಗಿಸಿದ್ದು, ಬಾಲಕನ ದೇಹದ ಭಾಗಗಳು ಅರಣ್ಯ ಪ್ರದೇಶದಲ್ಲಿ ಹರಡಿಕೊಂಡಿದ್ದವು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾಲಕನ ತಂದೆ ಕೃಷಿ ಕಾರ್ಮಿಕರಾಗಿದ್ದಾನೆ. ಘಟನೆ ನಡೆದಿರುವ ಸಮೀಪದ ಸ್ಥಳದಲ್ಲೇ ಆತ ಕೂಲಿ ಕೆಲಸ ಮಾಡುತ್ತಿದ್ದು, ಗುಡಿಸಲಿನಲ್ಲಿ ವಾಸವಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು, ಇದೇ ರೀತಿ ಘಟನೆಯೊಂದು ಕಳೆದ ಡಿಸೆಂಬರ್​ 23ರಂದು ಜರುಗಿದ್ದು, 55ವರ್ಷದ ವೃದ್ಧನೋರ್ವನನ್ನು ಸಿಂಹವೊಂದು ಹೊತ್ತೊಯ್ದಿತ್ತು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಸಿಂಹವನ್ನು ಸೆರೆಹಿಡಿಯಲು ಈಗಾಗಲೇ ಇಲಾಖೆ ವತಿಯಿಂದ ಬೋನನ್ನು ಇರಿಸಲಾಗಿದೆ ಎಂದಿದ್ದಾರೆ.

ABOUT THE AUTHOR

...view details