ಕರ್ನಾಟಕ

karnataka

ETV Bharat / bharat

ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಕಣ್ತುಂಬಿಕೊಳ್ಳಲಿರುವ ಟ್ರಂಪ್ - Namaste Trump

ಸೋಮವಾರ ಭಾರತಕ್ಕೆ ಆಗಮಿಸಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರನ್ನು ಸ್ವಾಗತಿಸಲು ಸಕಲ ಸಿದ್ದತೆಗಳು ನಡೆದಿದ್ದು, ರೋಡ್​ ಶೋನಲ್ಲಿ ಭಾಗವಹಿಸಲಿರುವ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಜೊತೆಗೂಡಿ ದೇಶದ ಮತ್ತು ಗುಜರಾತ್​ ರಾಜ್ಯದ ಸಾಂಸ್ಕೃತಿಕ ವೈವಿಧ್ಯತೆಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ.

Guj visit: Trump to get glimpses of India''s cultural diversity
ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಕಣ್ತುಂಬಿಕೊಳ್ಳಲಿರುವ ಟ್ರಂಪ್

By

Published : Feb 23, 2020, 10:47 PM IST

ಅಹಮದಾಬಾದ್ : ಸೋಮವಾರ ಭಾರತಕ್ಕೆ ಆಗಮಿಸಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರನ್ನು ಸ್ವಾಗತಿಸಲು ಸಕಲ ಸಿದ್ದತೆಗಳು ನಡೆದಿದ್ದು, ರೋಡ್​ ಶೋನಲ್ಲಿ ಭಾಗವಹಿಸಲಿರುವ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಜೊತೆಗೂಡಿ ದೇಶದ ಮತ್ತು ಗುಜರಾತ್​ ರಾಜ್ಯದ ಸಾಂಸ್ಕೃತಿಕ ವೈವಿಧ್ಯತೆಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ.

ಈಗಾಗಲೇ ಗುಜರಾತ್‌ನ ಐತಿಹಾಸಿಕ ಸ್ಥಳಗಳ ಪ್ರತಿಕೃತಿಗಳನ್ನು ರೋಡ್ ಶೋ ನಡೆಯುವ ಮಾರ್ಗದ ಇಕ್ಕೆಲಗಳಲ್ಲಿ ಇರಿಸಲಾಗಿದೆ. ದೇಶದ ವಿವಿಧ ಭಾಗಗಳ ಸಾಂಸ್ಕೃತಿಕ ತಂಡಗಳು ರೋಡ್​ ಶೋ ನಡೆಯವ ಮಾರ್ಗದ ಮತ್ತು ನಗರದ ಮೊಟೆರಾ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಲಾದ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರದರ್ಶನ ನೀಡಲಿದ್ದಾರೆ.

28 ರಾಜ್ಯಗಳ ವಿವಿಧ ಸಾಂಸ್ಕೃತಿಕ ತಂಡಗಳನ್ನು ರೋಡ್ ಶೋ ಮಾರ್ಗದಲ್ಲಿ ಹಂತ ಹಂತವಾಗಿ ನಿಲ್ಲಿಸಲಾಗುತ್ತದೆ. ಪ್ರತೀ ತಂಡದ ಬಳಿಯೂ ಆ ರಾಜ್ಯದ ಇಬ್ಬರು ನಾಯಕರು ರಸ್ತೆ ಬದಿಯಲ್ಲಿ ನಿಂತು ಪ್ರಧಾನಿ ಮೋದಿ ಮತ್ತು ಟ್ರಂಪ್​ಗೆ ಸ್ವಾಗತ ಕೋರಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ಗುಜರಾತಿನ ಸಾಂಪ್ರದಾಯಿಕ 'ಗರ್ಬಾ ನೃತ್ಯ" ಪ್ರದರ್ಶನವೂ ಇರಲಿದೆ.

ರೋಡ್​ ಶೋ ಬಳಿಕ ನೂತನವಾಗಿ ನಿರ್ಮಿಸಲಾಗಿರುವ ಜಗತ್ತಿನ ಅತೀಡೊಡ್ಡ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯುವ "ನಮಸ್ತೆ ಟ್ರಂಪ್" ವಿಶೇಷ ಕಾರ್ಯಕ್ರಮದಲ್ಲಿ ಜಾನಪದ ತಂಡಗಳು ಬಾಲಿವುಡ್ ಗಾಯಕರು ಪ್ರದರ್ಶನ ನೀಡಲಿದ್ದಾರೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಟ್ರಂಪ್ ಮತ್ತು ಮೋದಿ ಸುಮಾರು ಒಂದು ಲಕ್ಷ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ABOUT THE AUTHOR

...view details