ಗಾಂಧಿನಗರ (ಗುಜರಾತ್) : ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 15ರಂದು ಜಗತ್ತಿನ ಅತಿ ದೊಡ್ದ ಸೌರ ಶಕ್ತಿ ಹಾಗೂ ಪವನಶಕ್ತಿಯ ಪಾರ್ಕ್ ಅನ್ನು ಗುಜರಾತ್ ಕಚ್ನಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.
ಈ ಬಗ್ಗೆ ಗುಜರಾತ್ ಸಿಎಂ ವಿಜಯ್ ರೂಪಾಣಿ ಮಾಹಿತಿ ನೀಡಿದ್ದು, ಪ್ರಧಾನಿ ಎರಡು ಕೆಲಸಗಳ ಸಲುವಾಗಿ ರಾಜ್ಯಕ್ಕೆ ಬರಲಿದ್ದು, 30 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ವಿಶ್ವದ ಅತಿ ದೊಡ್ಡ ಸೌರಶಕ್ತಿ ಹಾಗೂ ಪವನ ಶಕ್ತಿ ಪಾರ್ಕ್ ಅನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದಾದ ನಂತರ ಮಾಂಡವಿಯಲ್ಲಿ ಜನವಸತಿ ಪ್ರದೇಶಗಳಿಗೆ, ಕೈಗಾರಿಕೆಗಳಿಗೆ ನೀರನ್ನು ಪೂರೈಸುವ ಸಲುವಾಗಿ ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸುವ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.