ಭುಜ್( ಗುಜರಾತ್):ಭಾರತಕ್ಕೆ ಅನಧಿಕೃತವಾಗಿ ಪ್ರವೇಶಿಸಲು ಯತ್ನಿಸಿದ್ದ ಪಾಕ್ ಪ್ರಜೆಯನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧರು ವಶಕ್ಕೆ ಪಡೆದಿದ್ದಾರೆ. ಗುಜರಾತ್ನ ಕಛ್ ಜಿಲ್ಲೆಯ ಭಾರತ- ಪಾಕ್ ಗಡಿಯಲ್ಲಿ ವ್ಯಕ್ತಿಯನ್ನು ಬಂಧಿಲಾಗಿದೆ. ಶೋಯಬ್ ಅಹಮದ್ (38) ಎಂಬಾತ ಬಂಧಿತನಾಗಿದ್ದು ವಿಚಾರಣೆ ಒಳಪಡಿಸಲಾಗಿದೆ.
ಭಾರತಕ್ಕೆ ನುಸುಳಲು ಯತ್ನ: ಬಿಎಸ್ಎಫ್ನಿಂದ ಮಾದಕ ವ್ಯಸನಿ ಬಂಧನ - ಭಾರತ-ಪಾಕ್ ಗಡಿ
ಭಾರತಕ್ಕೆ ಕಾನೂನುಬಾಹಿರವಾಗಿ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಬಿಎಸ್ಎಫ್ ಯೋಧರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಮೇಲ್ನೋಟಕ್ಕೆ ವ್ಯಕ್ತಿ ಮಾದಕ ವ್ಯಸನಿ ಎಂದು ಗೊತ್ತಾಗಿದ್ದು ವಿಚಾರಣೆ ಬಳಿಕ ಸತ್ಯಾಂಶ ಹೊರಬರಬೇಕಿದೆ.
ಶೋಯಬ್ ಅಹಮದ್ ಕರಾಚಿ ನಗರದ ಶಾ ನವಾಝ್ ಭುಟ್ಟೋ ಕಾಲೋನಿಯ ಪ್ರಜೆ ಎಂದು ಹೇಳಲಾಗುತ್ತಿದೆ. ಬಂಧಿತನಿಂದ ಸುಮಾರು 150 ಗ್ರಾಂನಷ್ಟು ಅಮಲು ಪದಾರ್ಥವನ್ನು ವಶಪಡಿಸಿಕೊಳ್ಳಲಾಗಿದ್ದು ಪ್ರಾಥಮಿಕ ತನಿಖೆಯಲ್ಲಿ ಮಾದಕ ವ್ಯಸನಿ ಎಂಬುದು ಗೊತ್ತಾಗಿದೆ. ಅಮಲು ಪದಾರ್ಥದ ಜೊತೆಗೆ ಪಾಕ್ ಕರೆನ್ಸಿ ಹಾಗೂ ಒಂದು ಪಾಕ್ಗೆ ಸಂಬಂಧಿಸಿದ ಗುರುತಿನ ಚೀಟಿಯನ್ನು ಜಪ್ತಿ ಮಾಡಲಾಗಿದೆ. ''ಬಿಎಸ್ಎಫ್ ಸಿಬ್ಬಂದಿ ಗಸ್ತುವೇಳೆ ದೋಲಾವೀರ ಸಮೀಪದ ಪಿಲ್ಲರ್ ನಂಬರ್ 1024ರ ಬಳಿ ವ್ಯಕ್ತಿ ಸೆರೆ ಸಿಕ್ಕಿದ್ದಾನೆ'' ಎಂದು ಗುಜರಾತ್ ಫ್ರಾಂಟಿಯರ್ನ ಇನ್ಸ್ಪೆಕ್ಟರ್ ಜನರಲ್ ಜಿ.ಎಸ್.ಮಲಿಕ್ ಸ್ಪಷ್ಟಪಡಿಸಿದ್ದಾರೆ. ಪ್ರಾಥಮಿಕ ವಿಚಾರಣೆ ಬಳಿಕ ಕಛ್ನ ಬಲಸಾರ್ ಪೊಲೀಸರಿಗೆ ವಶಕ್ಕೆ ವ್ಯಕ್ತಿಯನ್ನು ನೀಡಲಾಗಿದೆ. ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಬಳಿಕ ಶೋಯಬ್ನನ್ನು ಭುಜ್ನಲ್ಲಿರುವ ಜಂಟಿ ವಿಚಾರಣಾ ಕೇಂದ್ರಕ್ಕೆ ಕರೆತರಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.