ಅಹಮದಾಬಾದ್:ಗುಜರಾತ್ ಸಿಎಂ ವಿಜಯ್ ರೂಪಾಣಿ ಸೇರಿದಂತೆ ಗಣ್ಯ ವ್ಯಕ್ತಿಗಳ ಪ್ರವಾಸಕ್ಕಾಗಿ ಹೊಸ ವಿಮಾನ ಖರೀದಿಸಲು ಗುಜರಾತ್ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಬರೋಬ್ಬರಿ 191 ಕೋಟಿ ರೂಪಾಯಿ ಖರ್ಚು ಮಾಡಿದೆ.
ವಿಐಪಿ ಟ್ರಿಪ್‌ಗಾಗಿ 191ಕೋಟಿ ರೂ ಖರ್ಚು! ದುಬಾರಿಯಾದ ಗುಜರಾತ್ ಸರ್ಕಾರದ ನಿರ್ಧಾರ! - ಅಹಮದಾಬಾದ್
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ವಿಐಪಿ ಪ್ರವಾಸಕ್ಕಾಗಿ ಗುಜರಾತ್ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಹೊಸ ಏರ್ಕ್ರಾಫ್ಟ್ ಖರೀದಿಸಿದೆ.
![ವಿಐಪಿ ಟ್ರಿಪ್‌ಗಾಗಿ 191ಕೋಟಿ ರೂ ಖರ್ಚು! ದುಬಾರಿಯಾದ ಗುಜರಾತ್ ಸರ್ಕಾರದ ನಿರ್ಧಾರ!](https://etvbharatimages.akamaized.net/etvbharat/prod-images/768-512-4981616-thumbnail-3x2-wdfdf.jpg)
ಸಾಂದರ್ಭಿಕ ಚಿತ್ರ
ಸದ್ಯ ಮುಖ್ಯಮಂತ್ರಿ ಬೀಚ್ ಕ್ರಾಫ್ಟ್ ಸೂಪರ್ ಕಿಂಗ್ ಏರ್ಕ್ರಾಫ್ಟ್ ಬಳಸುತ್ತಿದ್ದು, ಇದೀಗ ಹೊಸ ತಂತ್ರಜ್ಞಾನದ ಬೊಂಬಾರ್ಡಿಯರ್ ಏರ್ಕ್ರಾಫ್ಟ್ನಲ್ಲಿ ಕುಳಿತು ಹಾರಲು ಮುಂದಾಗಿದ್ದಾರೆ. 12 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಇದಕ್ಕಿದ್ದು ಸುಮಾರು 7 ಸಾವಿರ ಕಿಲೋ ಮೀಟರುಗಳವರೆಗೆ ಹಾರಾಟ ನಡೆಸಬಲ್ಲದು. ಈ ಏರ್ಕ್ರಾಫ್ಟ್ ಗಂಟೆಗೆ 870 ಕಿಲೋ ಮೀಟರ್ ಕ್ರಮಿಸಬಲ್ಲದು.
ಈ ಹೊಸ ವಿಮಾನದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರು ಪ್ರಯಾಣಿಸಲಿದ್ದು, ತಿಂಗಳ ಕೊನೆಯ ವಾರದಲ್ಲಿ ಗುಜರಾತ್ ಸರ್ಕಾರದ ಕೈ ಸೇರಲಿದೆ.