ನವದೆಹಲಿ: ದೇಶಾದ್ಯಂತ ಅಕ್ಟೋಬರ್ 1ರಿಂದ ಅನ್ಲಾಕ್ 5.0 ಜಾರಿಗೊಂಡಿದ್ದು, ಇದರಲ್ಲಿ ಅಕ್ಟೋಬರ್ 15ರಿಂದ ಶಾಲಾ - ಕಾಲೇಜು ಹಾಗೂ ಶಿಕ್ಷಣ ತರಬೇತಿ ಕೇಂದ್ರ ರೀ ಓಪನ್ ಮಾಡಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ.
ಅ.15ರಿಂದ ಶಾಲಾ - ಕಾಲೇಜು ರೀ ಓಪನ್: ಹೊಸ ಗೈಡ್ಲೈನ್ಸ್ ಪ್ರಕಟಿಸಿದ ಶಿಕ್ಷಣ ಸಚಿವಾಲಯ! - ಶಿಕ್ಷಣ ಸಚಿವಾಲಯದಿಂದ ಮಾರ್ಗಸೂಚಿ
ಅಕ್ಟೋಬರ್ 15ರಿಂದ ದೇಶಾದ್ಯಂತ ಶಾಲಾ - ಕಾಲೇಜ್ ರೀ ಓಪನ್ ಮಾಡಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದ್ದು, ಅದಕ್ಕಾಗಿ ಇದೀಗ ಶಿಕ್ಷಣ ಸಚಿವಾಲಯದಿಂದ ಹೊಸ ಮಾರ್ಗಸೂಚಿ ರಿಲೀಸ್ ಆಗಿವೆ.
ಇದೀಗ ಶಿಕ್ಷಣ ಸಚಿವಾಲಯ ಇದಕ್ಕಾಗಿ ಮಾರ್ಗಸೂಚಿ ಹೊರಡಿಸಿದ್ದು, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಇದಕ್ಕಾಗಿ ತಮ್ಮದೇ ಮಾರ್ಗಸೂಚಿ ರೂಪಿಸುವಂತೆ ತಿಳಿಸಿದೆ. ಆರೋಗ್ಯ, ನೈರ್ಮಲ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಶಿಕ್ಷಣ ಸಚಿವಾಲಯ ತಿಳಿಸಿದ್ದು, ದೈಹಿಕ ಮತ್ತು ಸಾಮಾಜಿಕ ಅಂತರ ಬಳಕೆ ಮಾಡಿ ಪಾಠ ಹೇಳಲು ಸೂಚಿಸಿದೆ.
ಅಕ್ಟೋಬರ್ 15ರಿಂದ ಶಾಲೆ, ಕಾಲೇಜು ಹಾಗೂ ಶಿಕ್ಷಣ ತರಬೇತಿ ಸಂಸ್ಥೆಗಳು ಓಪನ್ ಆಗಲಿದ್ದು, ಶಾಲಾ - ಕಾಲೇಜುಗಳಿಗೆ ಬರುವುದು ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟಿದ್ದಾಗಿದೆ ಎಂದು ಹೇಳಲಾಗಿದ್ದು, ಪೋಷಕರ ಅನುಮತಿ ಕಡ್ಡಾಯವಾಗಿದೆ ಎಂದು ತಿಳಿಸಿದೆ. ಇಚ್ಚಿಸಿದ್ರೆ ಆನ್ಲೈನ್ ಮೂಲಕ ಕ್ಲಾಸ್ಗಳಲ್ಲಿ ಭಾಗಿಯಾಗಬಹುದು ಎಂದಿದೆ.