ಕರ್ನಾಟಕ

karnataka

By

Published : Mar 14, 2019, 3:34 PM IST

ETV Bharat / bharat

224 ಕೋಟಿ ರೂ. ಜಿಎಸ್‌ಟಿ ವಂಚನೆ... ಆರೋಪಿ ಅಂದರ್​

ವಂಚನೆಯಲ್ಲಿ ಭಾಗಿಯಾಗಿರುವ ಪ್ರಮುಖ ಶಂಕಿತ ಆರೋಪಿ ಭರಣಿ ಕಮೊಡಿಟೀಸ್ ಪ್ರೈವೇಟ್ ಲಿಮಿಟೆಡ್​ ನಿರ್ದೇಶಕ ಜಗನ್ ಸತ್ಯ ಶ್ರೀಧರ್ ರೆಡ್ಡಿ ಅವರನ್ನು ಬಂಧಿಸಲಾಗಿದ್ದು, ಆತನಿಂದ ₹ 19.75 ಕೋಟಿ ವಶಪಡಿಸಿಕೊಳ್ಳಲಾಗಿದೆ.

GST

ಹೈದರಾಬಾದ್‌: ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್‌ಟಿ) 8 ಕಂಪನಿಗಳ ₹ 1,289 ಕೋಟಿ ಮೌಲ್ಯದ ನಕಲಿ ಇನ್​ವಾಯ್ಸ್​ ಸೃಷ್ಟಿಸಿ ₹ 224 ಕೋಟಿ ಜಿಎಸ್​ಟಿ ವಂಚನೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.

ಎಂಟು ಕಂಪನಿಗಳಲ್ಲಿ ವಿಎಸ್ ಫೆರಸ್ ಎಂಟರ್ಪ್ರೈಸಸ್, ಭರಣಿ ಕಮೊಡಿಟೀಸ್, ಇನ್ಫಿನಿಟಿ ಮತ್ತು ಹಿಂದೂಸ್ತಾನ್ ಸ್ಟೀಲ್ಸ್ ಎಂದು ಗುರುತಿಸಲಾಗಿದೆ. ಈ ಕಂಪನಿಗಳು ₹ 1,289 ಕೋಟಿ ಮೌಲ್ಯದ ನಕಲಿ ಇನ್‌ವಾಯ್ಸ್‌ ಸೃಷ್ಟಿಸುವ ಮೂಲಕ ₹ 224 ಕೋಟಿ ಜಿಎಸ್‌ಟಿ ವಂಚನೆ ನಡೆಸಿವೆ ಎಂದು ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ.

ಇವರಲ್ಲಿ ಕೆಲವು ತೆರಿಗೆಪಾವತಿದಾರರು ಒಂದೇ ವಿಳಾಸದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ವಂಚಕರೇ ಈ 8 ಕಂಪನಿಗಳ ನಿರ್ದೇಶಕರು/ಪಾಲುದಾರರು/ಪ್ರವರ್ತಕರ ಹುದ್ದೆಯಲ್ಲಿದ್ದಾರೆ. ಈ ಕಂಪನಿಗಳು ನಕಲಿ ವ್ಯಾಪಾರ ಮತ್ತು ವಹಿವಾಟಿನ ಸುತ್ತೋಲೆಗಳನ್ನು ಹೊರಡಿಸುವುದರಲ್ಲಿ ಹಾಗೂ ಅಂತಹ ನಕಲಿ ಇನ್‌ವಾಯ್ಸ್‌ ಮತ್ತು ಇ- ವೇ ಬಿಲ್‌ಗಳನ್ನು ಬೇರೆಯವರಿಗೆ ಪೂರೈಸುವ ಮೂಲಕವೂ ವಂಚನೆ ಎಸಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

For All Latest Updates

TAGGED:

ABOUT THE AUTHOR

...view details