ಹರಿದ್ವಾರ:ದಶಕದ ಹಿಂದಷ್ಟೇ ಚಿಕ್ಕ ಕಂಪನಿಯಾಗಿದ್ದ ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ, ಈಗ ಎಫ್‌ಎಂಸಿಜಿ (ತ್ವರಿತ ಮಾರಾಟದ ಉತ್ಪನ್ನಗಳ ವಲಯ) ವಲಯದಲ್ಲಿ ದೈತ್ಯನಾಗಿ ಬೆಳೆದು ನಿಂತಿದೆ
ಕಳೆದ ವಿತ್ತೀಯ ವರ್ಷದಲ್ಲಿ ಪತಂಜಲಿ ಉತ್ಪನ್ನಗಳ ಮಾರಾಟ ಬೆಳವಣಿಗೆ ಶೇ 10ರಷ್ಟು ಪ್ರಗತಿಯಲ್ಲಿದ್ದು, ₹ 8,100 ಕೋಟಿಗೂ ಅಧಿಕ ಲಾಂಭಾಂಶವಾಗಿದೆ ಎಂದು ಇತ್ತೀಚಿನ ವಿಶ್ಲೇಷಣೆಗಳು ತಿಳಿಸಿವೆ.
2014ರ ಲೋಕಸಭೆ ಚುನಾವಣೆಯಲ್ಲಿ ಹಿಂದುತ್ವದ ಅಲೆಯಲ್ಲಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿದ ಮೋದಿ, ಇದಕ್ಕೆ ಬಾಬಾ ರಾಮ್ದೇವ್ ಕೂಡ ಪ್ರಚಾರದ ಸಾಥ್ ನೀಡಿದ್ದರು. ಈ ಬಳಿಕ ಪತಂಜಲಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ತ್ವರಿತವಾಗಿ ಬಿಕರಿಯಾಗುತ್ತಿವೆ. ಎಂಎನ್ಸಿ ಕಂಪನಿಗಳಿಗೆ ಸಡ್ಡು ಹೊಡೆದು ದೈತ್ಯ ಕಂಪನಿಯಾಗಿ ಬೆಳೆದಿದೆ.
ಪತಂಜಲಿ ಉತ್ಪನ್ನಗಳ ಉಸ್ತುವಾರಿ ಹೊತ್ತಿರುವ ಅವರ ಶಿಷ್ಯ ಆಚಾರ್ಯ ಬಾಲಕೃಷ್ ಅವರ ನೇತೃತ್ವದಲ್ಲಿ 2017ರ ವೇಳೆ ಬಹುರಾಷ್ಟ್ರೀಯ ಕಂಪನಿಗಳ ಸಾಲಿಗೆ ಸೇರುವುದಾಗಿ ರಾಮ್ದೇವ್ ಘೋಷಿಸಿದ್ದರು. ಈ ಬಳಿಕ 2018ರ ಮಾರ್ಚ್ ಅಂತ್ಯದ ವೇಳೆ ಉತ್ಪನ್ನಗಳ ಮಾರಾಟ ದ್ವಿಗುಣಗೊಂಡು 200 ಶತಕೋಟಿ ರೂ. (2.84 ಬಿಲಿಯನ್ ಡಾಲರ್) ವಹಿವಾಟು ನಡೆಸಿದೆ.
ಪತಂಜಲಿ ಉತ್ಪನ್ನಗಳ ಮಾರಾಟ, ವಾರ್ಷಿಕ ಹಣಕಾಸು ಶೇ 10ರ ಪ್ರತಿಶತ ಪ್ರಗತಿ ಸಾಧಿಸುತ್ತಿದ್ದು, 81 ಬಿಲಿಯನ್ ರೂಪಾಯಿ ಸರಕು ಮಾರಾಟವಾಗಿದೆ. ಶೇ 98.5ರಷ್ಟು ಷೇರುಗಳು ಆಚಾರ್ಯ ಬಾಲಕೃಷ್ ಅವರ ಬಳಿ ಇವೆ. ದೇಶಾದ್ಯಂತ 3,500 ವಿತರಕರು ಹಾಗೂ 47 ಸಾವಿರ ಪತಂಜಲಿ ಮಳಿಗೆಗಳಿವೆ ಎಂದು ವಿಶ್ಲೇಷಿಸಲಾಗಿದೆ.