ನವದೆಹಲಿ - ಯುಪಿ ಬಾರ್ಡರ್: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ದೆಹಲಿ ಚಲೋ ನಡೆಸಲು ದೇಶದ ಮೂಲೆ ಮೂಲೆಗಳಿಂದ ರೈತರು ದೆಹಲಿಯತ್ತ ಹೆಜ್ಜೆ ಹಾಕಿದ್ದಾರೆ.
'ದೆಹಲಿ ಚಲೋ': ಚಳಿಯಲ್ಲಿ ನಡುಗುತ್ತಲೇ ಹಾಡುತ್ತ ಘಾಜಿಪುರ ಗಡಿಯಲ್ಲಿ ರಾತ್ರಿ ಕಳೆದ ರೈತರು
ಇತ್ತೀಚೆಗೆ ಜಾರಿಯಾದ ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ದೇಶದ ನಾನಾ ಭಾಗಗಳಿಂದ ಅನ್ನದಾತರು ದೆಹಲಿಯತ್ತ 'ದೆಹಲಿ ಚಲೋ' ನಡೆಸಲು ಹೊರಟ್ಟಿದ್ದಾರೆ. ಆದರೆ, ರಾಜಧಾನಿಯ ಕೇಂದ್ರಭಾಗಕ್ಕೆ ತೆರಳಲು ಅವಕಾಶ ನೀಡಿದ ಹಿನ್ನೆಲೆ ಇಡೀ ರಾತ್ರಿ ರೈತರು ದೆಹಲಿ - ಉತ್ತರ ಪ್ರದೇಶ ಗಡಿಯಲ್ಲೇ ಚಳಿಯಲ್ಲಿ ನಡುಗುತ್ತಾ ಹಾಡು ಹಾಡುತ್ತಾ ರಾತ್ರಿ ಕಳೆದಿದ್ದಾರೆ.
ಘಾಜಿಪುರ ಗಡಿಯಲ್ಲಿ ರಾತ್ರಿ ಕಳೆದ ರೈತರು
ಆದರೆ, ರೈತರ ಆಂದೋಲನ ತಡೆಯಲು ಸರ್ಕಾರ ಅವರಿಗೆ ರಾಜ್ಯದ ಗಡಿಗಳಲ್ಲೇ ಘೇರಾವ್ ಹಾಕಿದೆ. ದೆಹಲಿಯ ಹೃದಯ ಭಾಗದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಲು ನಿರಾಕರಿಸಿದೆ. ಆದರೆ, ರೈತರು ಇದ್ದಲ್ಲಿಯೇ ತಮ್ಮ ಐತಿಹಾಸಿಕ ಹೋರಾಟ ಮುಂದುವರಿಸಿದ್ದಾರೆ.
ಘಾಜಿಪುರ ಗಡಿಯಲ್ಲಿ ಉಳಿದಿರುವ ರೈತರೆಲ್ಲ ಹಾಡುಗಳನ್ನು ಹಾಡುತ್ತಾ, ಸಂಗೀತ ವಾದ್ಯಗಳನ್ನು ನುಡಿಸುತ್ತಾ ಚಳಿಯಲ್ಲಿ ನಡುಗುತ್ತಲೇ ಇಡೀ ರಾತ್ರಿ ಕಳೆದಿದ್ದಾರೆ. ಕೆಲವರು ರಸ್ತೆಯಲ್ಲಿ ಮಲಗಿದ್ದು ಕಂಡು ಬಂತು. ಏನೇ ಆಗಲಿ ಕೇಂದ್ರದ ಷರತ್ತುಬದ್ದ ಮಾತುಕತೆಗೆ ಒಪ್ಪದಿರಲು ರೈತ ನಾಯಕರು ನಿರ್ಧರಿಸಿದ್ದಾರೆ.
Last Updated : Nov 30, 2020, 9:38 AM IST