ಜೈಪುರ: ರಾಜಸ್ಥಾನದಲ್ಲಿ ಕೊರೊನಾ ಸೋಂಕು ನಿರಂತರವಾಗಿ ಹೆಚ್ಚುತ್ತಿದೆ. ಕೊರೊನಾ ಲಸಿಕೆ ಬರುವವರೆಗೂ ಮಾಸ್ಕೇ ಲಸಿಕೆ. ಹೀಗಾಗಿ ಸರ್ಕಾರವು ಜನರು ಮುಖಗವಸುಗಳನ್ನು ಧರಿಸುವಂತೆ ಜಾಗೃತಿ ಮೂಡಿಸುತ್ತಿದೆ. ಮಾಸ್ಕ್ ಧರಿಸದೇ ತಿರುಗಾಡುವವರಿಗೆ ದಂಡ ವಿಧಿಸಲಾಗುತ್ತಿದೆ.
ಮಾಸ್ಕ್ ಹಾಕದೇ ಮೆರವಣಿಗೆ ಹೊರಟಿದ್ದ ವರನಿಗೆ ಬಿತ್ತು 500 ರೂ ದಂಡ - ರಾಜಸ್ಥಾನದಲ್ಲಿ ಕೊರೊನಾ ಸೋಂಕು ಹೆಚ್ಚಳವ ಸುದ್ದಿ
ರಾಜಸ್ಥಾನದಲ್ಲಿ ಕೊರೊನಾ ಸೋಂಕು ನಿರಂತರವಾಗಿ ಹೆಚ್ಚುತ್ತಿದೆ. ಕೊರೊನಾ ಪಾಸಿಟಿವ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಜೈಪುರದಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಅಲ್ಲದೇ, ಕೊರೊನಾ ಮಾರ್ಗಸೂಚಿ ಅನುಸರಿಸಲು ಜನರಲ್ಲಿ ಮನವಿ ಮಾಡಲಾಗುತ್ತಿದೆ. ಮಾಸ್ಕ್ ಹಾಕದವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಮದುವೆ ಮೆರವಣಿಗೆಯಲ್ಲಿ ಮಾಸ್ಕ್ ಧರಿಸಿದೇ ಮೆರವಣಿಗೆ ಹೊರಟ್ಟಿದ್ದ ವರನಿಗೆ 500ರೂ. ದಂಡ ವಿಧಿಸಿದ್ದಾರೆ.
ಅದೇ ರೀತಿ ರಾಜಧಾನಿ ಜೈಪುರದ ವಿಶ್ವಕರ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೇ ಸಾರೋಟ್ನಲ್ಲಿ ಕುಳಿತು ಮೆರವಣಿಗೆ ಹೋಗುತ್ತಿದ್ದ ವರನನ್ನು ತಡೆದು ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ. ಅಲ್ಲದೇ ಮದುವೆಗೆ ಬಂದಿದ್ದ ಜನರಿಗೆ ಕೂಡ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಇನ್ನು ಈಗ ಇದು ಹಬ್ಬ - ಹರಿದಿನಗಳು, ಮದುವೆ ಕಾರ್ಯಗಳು ಆರಂಭವಾಗಿರುವುದರಿಂದ ಜನರು ಹೆಚ್ಚು ಒಟ್ಟಿಗೆ ಸೇರುವ ಹಿನ್ನೆಲೆ ಜೋಧ್ಪುರ್ ಪೊಲೀಸರು ಕೋವಿಡ್ ಮಾರ್ಗಸೂಚಿಗಳನ್ನು ಇನ್ನಷ್ಟು ಬಿಗಿಗೊಳಿಸಿದ್ದು, ಕೊರೊನಾ ನಿಯಮಾವಳಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.