ಮೆಡ್ಚಲ್:ಮದುವೆ ಮಾಡಿಕೊಂಡು ಹೊಸ ಜೀವನಕ್ಕೆ ಕಾಲಿಡಬೇಕಾಗಿದ್ದ ಯುವಕನೊಬ್ಬ ಮದುವೆ ಮಂಟಪದ ಹಾಲ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೆಡ್ಚಲ್ ಜಿಲ್ಲೆಯಲ್ಲಿ ನಡೆದಿದೆ.
ಮುಹೂರ್ತಕ್ಕೂ ಮುನ್ನವೇ ಮದುವೆ ಮಂಟಪದಲ್ಲೇ ವರ ನೇಣಿಗೆ ಶರಣು! - ಮೆಡ್ಚಲ್ನಲ್ಲಿ ವರ ನೇಣಿಗೆ ಶರಣು ಸುದ್ದಿ
ಇಂದು ಮದುವೆಯಾಗಬೇಕಿದ್ದ ವರನೊಬ್ಬ ಮಂಟಪದ ಹಾಲ್ನಲ್ಲೇ ನೇಣಿಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಹೈದರಾಬಾದ್ ನಿವಾಸಿ ಸಂದೀಪ್ಗೆ ಇಂದು ಮದುವೆ ನಿಶ್ಚಿಯವಾಗಿತ್ತು. ಮೆಡ್ಚಲ್ ಜಿಲ್ಲೆಯ ಕೊಂಪಲ್ಲಿ ನಗರದ ಫಂಕ್ಷನ್ ಹಾಲ್ವೊಂದರಲ್ಲಿ ಮದುವೆ ಕಾರ್ಯಾಕ್ರಮ ಇತ್ತು. ಎಲ್ಲವೂ ಸಂತೋಷದಿಂದ ನಡೆಯುತ್ತಿತ್ತು. ಆದರೆ ಮುಹೂರ್ತಕ್ಕೂ ಮುನ್ನವೇ ವರ ನೇಣಿಗೆ ಶರಣಾಗಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಈ ಸುದ್ದಿ ತಿಳಿದ ಪೇಟ್ ಬಶೀರಾಬಾದ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.