ಆಗ್ರಾ (ಉ.ಪ್ರ):ಇಲ್ಲಿನ ನಾಗ್ಲಾ ಕಿಶನ್ ಲಾಲ್ ಪ್ರದೇಶದಲ್ಲಿ ಒಂದೇ ಕುಟುಂಬದ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮೃತರನ್ನು ರಾಮ್ವೀರ್, ಆತನ ಪತ್ನಿ ಮೀರಾ ಹಾಗೂ ಆತನ 23 ವರ್ಷದ ಪುತ್ರ ಬಬ್ಲು ಎಂದು ಗುರುತಿಸಲಾಗಿದೆ. ಪಾಲಿಥಿನ್ ಟೇಪ್ ಬಳಸಿ ಮೂವರ ಬಾಯಿ ಹಾಗೂ ಕುತ್ತಿಗೆಗೆ ಕಟ್ಟಿರುವುದು ಕಂಡು ಬಂದಿದೆ. ಕೊಲೆ ಮಾಡಿದ ಬಳಿಕ ಮನೆಯಲ್ಲಿನ ಗ್ಯಾಸ್ ಬಳಸಿ ಮೃತದೇಹಗಳನ್ನು ಸುಡಲು ಪ್ರಯತ್ನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.