ಪಾಟ್ನಾ (ಬಿಹಾರ): ಲಡಾಖ್‌ನಲ್ಲಿ ಭಾರತ ಮತ್ತು ಚೀನಾದ ಸೈನ್ಯದ ನಡುವಿನ ಸಂಘರ್ಷದಲ್ಲಿ ದೇಶದ 20 ಸೈನಿಕರು ಹುತಾತ್ಮರಾಗಿದ್ದು, ಇವರಲ್ಲಿ ಐವರು ಬಿಹಾರದವರಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಬಿಹಾರ ರಾಜ್ಯಾದ್ಯಂತ ಜನ ದುಃಖ ಹಾಗೂ ಕೋಪದಿಂದ ಪ್ರತಿಕ್ರಿಯೆ ನೀಡಿದ್ದಾರೆ.

ಲಡಾಖ್‌ನಲ್ಲಿ ಹುತಾತ್ಮರಾದ ಹವಾಲ್ದಾರ್ ಸುನೀಲ್ ಕುಮಾರ್ ಅವರ ಮೃತದೇಹವು ವಿಶೇಷ ವಿಮಾನದ ಮೂಲಕ ವಿಮಾನ ನಿಲ್ದಾಣ ತಲುಪಿದಾಗ, ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮತ್ತು ಇತರ ಮಂತ್ರಿಗಳು, ಪ್ರತಿಪಕ್ಷದ ನಾಯಕ ತೇಜಶ್ವಿ ಯಾದವ್ ಮತ್ತು ಜನ ಅಧಿಕಾರ ಪಕ್ಷದ ಸಂಸ್ಥಾಪಕ ಪಪ್ಪು ಯಾದವ್ ಅವರು ರಾಜಕೀಯ ಪೈಪೋಟಿಯನ್ನು ಬದಿಗಿರಿಸಿ ಒಟ್ಟು ಸೇರಿದ್ದರು.
ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ಹವಾಲ್ದಾರ್ ಸುನೀಲ್ ಕುಮಾರ್, ಸಿಪಾಯ್ ಅಮನ್ ಕುಮಾರ್ ಸಿಂಗ್, ಸಿಪಾಯ್ ಜಯ್ ಕಿಶೋರ್ ಸಿಂಗ್, ಸಿಪಾಯ್ ಕುಂದನ್ ಕುಮಾರ್ ಹಾಗೂ ಸಿಪಾಯ್ ಚಂದನ್ ಯಾದವ್ ಕುಮಾರ್ ಬಿಹಾರ ಮೂಲದವರಾಗಿದ್ದಾರೆ.