ಚೆನ್ನೈ: ಗ್ರೇಟರ್ ಚೆನ್ನೈ ಮಹಾನಗರ ಪಾಲಿಕೆಯು ಕೊರೊನಾ ವೈರಸ್ ವಿರುದ್ಧ ಹೋರಾಡಲು ಎಲ್ಲಾ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದಕ್ಕಾಗಿ ಸಾರ್ವಜನಿಕರಿಗೆ ಫೇಸ್ ಮಾಸ್ಕ್ ಬಳಕೆಯನ್ನು ಕಡ್ಡಾಯಗೊಳೊಸಿದೆ.
ಸಾಂಕ್ರಾಮಿಕ ರೋಗಗಳ ಕಾಯ್ದೆ 1987 ರ ಸೆಕ್ಷನ್ 2 ರ ಅಡಿಯಲ್ಲಿ ಗ್ರೇಟರ್ ಚೆನ್ನೈ ಮಹಾನಗರ ಪಾಲಿಕೆ, ಪಾಲಿಕೆ ವ್ಯಾಪ್ತಿಯ ಎಲ್ಲ ಸಾರ್ವಜನಿಕರು ತಮ್ಮ ಮನೆಗಳಿಂದ ಹೊರಹೋಗುವಾಗ ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕೆಂದು ನಿರ್ದೇಶಿಸಿದೆ.
ಇನ್ನು ಪಾಲಿಕೆಯ ಈ ನಿರ್ದೇಶನವನ್ನು ಧಿಕ್ಕರಿಸುವ ಯಾವುದೇ ವ್ಯಕ್ತಿಯು ಅಪರಾಧ ಮಾಡಿದನೆಂದು ಪರಿಗಣಿಸಲಾಗುತ್ತದೆ ಮತ್ತು ಈ ಕೆಳಗಿನ ಶಿಕ್ಷೆಯನ್ನು ಪೊಲೀಸ್ ಅಧಿಕಾರಿಗಳು ವಿಧಿಸುತ್ತಾರೆ ಎಂದು ಹೇಳಲಾಗಿದೆ.
- ನಿಯಮ ಉಲ್ಲಂಘಿಸಿಸ ವಾಹನವನ್ನು ವಶಪಡಿಸಿಕೊಳ್ಳಲಾಗುವುದು
- ಚಾಲನಾ ಪರವಾನಗಿಯನ್ನು ಆರು ತಿಂಗಳವರೆಗೆ ರದ್ದುಗೊಳಿಸಲಾಗುತ್ತದೆೆ.
- ನಿಯಮ ಉಲ್ಲಂಘಿಸುವ ಪಾದಚಾರಿಗಳಿಗೆ ದಿನಕ್ಕೆ ರೂ .100 / - ದಂಡ.
ಈ ಸೂಚನೆ ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ಪಾಲಿಕೆ ತಿಳಿಸಿದೆ.