ಕರ್ನಾಟಕ

karnataka

ETV Bharat / bharat

ಬಾಲಿವುಡ್​ನ ಸಲಿಂಗಕಾಮ ಚಿತ್ರ ಮೆಚ್ಚಿ 'ಗ್ರೇಟ್' ಎಂದ ಟ್ರಂಪ್​... ಯಾವುದು ಆ ಸಿನಿಮಾ..? - ಆಯುಷ್ಮಾನ್ ಖುರಾನ

ಬಾಲಿವುಡ್​ನ 'ಶುಭ್‌ ಮಂಗಲ್‌ ಜ್ಯಾದ ಸಾವಧಾನ್‌' ಸಿನಿಮಾವು ಸಲಿಂಗಕಾಮ ಕಥೆ ಆಧಾರಿತ ಚಿತ್ರವಾಗಿದೆ. ನಟ ಆಯುಷ್ಮಾನ್ ಖುರಾನಾ ಅಭಿನಯವನ್ನು ಮಾನವ ಹಕ್ಕುಗಳ ಪ್ರಚಾರಕ ಮತ್ತು ಎಲ್​ಜಿಬಿಟಿಕ್ಯು ಕಾರ್ಯಕರ್ತ ಪೀಟರ್ ಟ್ಯಾಟ್ಚೆಲ್ಸ್ ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸಿದ್ದರು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಸಿನಿಮಾ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

Donald Trump
ಡೊನಾಲ್ಡ್ ಟ್ರಂಪ್

By

Published : Feb 22, 2020, 4:35 AM IST

Updated : Feb 22, 2020, 7:30 AM IST

ನವದೆಹಲಿ:ಬಾಲಿವುಡ್ ನಟ ಆಯುಷ್ಮಾನ್ ಖುರಾನ ನಟಿಸಿರುವ ಹಾಗೂ ಹಿತೇಶ್​ ಕೆವಾಲ್ಯಾ ನಿರ್ದೇಶನದ 'ಶುಭ್‌ ಮಂಗಲ್‌ ಜ್ಯಾದ ಸಾವಧಾನ್‌' ಸಿನಿಮಾದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

'ಶುಭ್‌ ಮಂಗಲ್‌ ಜ್ಯಾದ ಸಾವಧಾನ್‌' ಸಿನಿಮಾ ಸಲಿಂಗಕಾಮಿ ಕಥೆ ಆಧಾರಿತ ಚಿತ್ರವಾಗಿದೆ. ನಟ ಆಯುಷ್ಮಾನ್ ಖುರಾನಾ ಅಭಿನಯವನ್ನು ಮಾನವ ಹಕ್ಕುಗಳ ಪ್ರಚಾರಕ ಮತ್ತು ಎಲ್​ಜಿಬಿಟಿಕ್ಯು ಕಾರ್ಯಕರ್ತ ಪೀಟರ್ ಟ್ಯಾಟ್ಚೆಲ್ಸ್ ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸಿಸಿದ್ದಾರೆ.

ಸಲಿಂಗಕಾಮವನ್ನು ನಿರಾಕರಿಸಿದ ನಂತರ ಸಲಿಂಗಕಾಮಿದ ಪ್ರಣಯವನ್ನು ಒಳಗೊಂಡ ಹೊಸ ಬಾಲಿವುಡ್ ಸಿನಿಮಾ ವಯಸ್ಸಾದವರನ್ನು ಗೆಲ್ಲುವ ಆಶಯವನ್ನು ಹೊಂದಿದೆ ಎಂದು ಪೀಟರ್‌ಟ್ಯಾಚೆಲ್ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಗ್ರೇಟ್!” ಎಂದು ಪ್ರತಿ ಟ್ವೀಟ್ ಮಾಡಿದ್ದಾರೆ.

ಟ್ರಂಪ್ ಟ್ವೀಟ್
Last Updated : Feb 22, 2020, 7:30 AM IST

ABOUT THE AUTHOR

...view details