ಕರ್ನಾಟಕ

karnataka

ETV Bharat / bharat

ರಾಮನಗರಿಯಲ್ಲಿ ವೈಭವ: ದೇಗುಲಗಳಿಗೆ ದೀಪಗಳ ಅಲಂಕಾರ, ರಸ್ತೆಗಳಲ್ಲಿ ಕಲಾಕೃತಿಗಳ ಚಿತ್ತಾರ - Ayodhya Ram mandir

ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಶ್ರೀರಾಮ ದೇವಾಲಯ ನಿರ್ಮಾಣ ಕೆಲಸಕ್ಕೆ ಅಡಿಪಾಯ ಹಾಕಲಿದ್ದಾರೆ. ಬಹುನಿರೀಕ್ಷಿತ ಈ ಕ್ಷಣಕ್ಕೆ ಅಯೋಧ್ಯೆಗೆ ಹೊಸ ರೂಪ ನೀಡಲಾಗುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಧಾನಿ ಮೋದಿಯವರ ಭೇಟಿ ಮತ್ತು ಅಡಿಪಾಯ ಹಾಕುವ ಸಮಾರಂಭದ ಬಗ್ಗೆ ಮಾಹಿತಿ ನೀಡಿದ್ದಾರೆ.

ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆಗೆ ಗ್ರ್ಯಾಂಡ್ ​ದೀಪೋತ್ಸವ
ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆಗೆ ಗ್ರ್ಯಾಂಡ್ ​ದೀಪೋತ್ಸವ

By

Published : Aug 1, 2020, 5:12 PM IST

ಅಯೋಧ್ಯೆ: ಐದು ಶತಮಾನಗಳ ಸುದೀರ್ಘ ಹೋರಾಟದ ನಂತರ, ರಾಮನಗರಿ ಎಂದು ಕರೆಯಲ್ಪಡುವ ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ನಿರ್ಮಾಣ ಪ್ರಾರಂಭವಾಗಲಿದೆ. ಈ ಶುಭ ಸಂದರ್ಭವು ದೇಶಾದ್ಯಂತ ಸಂತರು, ಮಹಾಂತರು ಮತ್ತು ಭಗವಾನ್ ರಾಮನ ಭಕ್ತರಲ್ಲಿ ಅಪಾರ ಸಂತೋಷವನ್ನುಂಟು ಮಾಡಿದೆ. ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ ಭೂಮಿ ಪೂಜೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ಭೂಮಿ ಪೂಜೆಯ ಐತಿಹಾಸಿಕ ಕ್ಷಣವನ್ನು ಗುರುತಿಸಲು ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಅಯೋಧ್ಯೆಯನ್ನು ನವವಧುವಿನಂತೆ ಅಲಂಕರಿಸಲಾಗುತ್ತಿದೆ. ಹನುಮಾನ್​ಗರಿಯ ಮುಂದೆ ಸುಂದರವಾದ ಸ್ವಾಗತ ಬಾಗಿಲು ನಿರ್ಮಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ಅಯೋಧ್ಯೆಯ ನಡುವಿನ ರಸ್ತೆಯು ಕಲಾಕೃತಿಗಳಿಂದ ಕೂಡಿದೆ. ಅಯೋಧ್ಯೆ ಮತ್ತು ಫೈಜಾಬಾದ್‌ನ ಎಲ್ಲಾ ಪ್ರಮುಖ ಮಾರ್ಗಗಳನ್ನು ವರ್ಣಚಿತ್ರಗಳು ಮತ್ತು ಇತರ ಕಲಾಕೃತಿಗಳಿಂದ ಶೃಂಗರಿಸಲಾಗುತ್ತಿದೆ.

ಈ ಕ್ಷಣವನ್ನು ದೀಪಾವಳಿಯಂತೆ ಆಚರಿಸಬೇಕು. ಯೋಗಿಯ ಮನವಿಯನ್ನು ಅನುಸರಿಸಿ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಮುಖಂಡರು ದೀಪೋತ್ಸವವನ್ನು ಆಯೋಜಿಸಲು ನಿರ್ಧರಿಸಿದರು. ಹೀಗಾಗಿ, ಭೂಮಿ ಪೂಜೆಗೆ ಒಂದು ದಿನ ಮೊದಲು ದೀಪೋತ್ಸವ ಪ್ರಾರಂಭವಾಗುತ್ತದೆ. ಆಗಸ್ಟ್ 4 ಮತ್ತು 5 ರಂದು ಅಯೋಧ್ಯೆಯ ಎಲ್ಲಾ ದೇವಾಲಯಗಳು ಮತ್ತು ಮಠಗಳು ದೀಪಗಳ ಬೆಳಕಿನಲ್ಲಿ ಕಂಗೊಳಿಸುತ್ತವೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಆಗಸ್ಟ್ 3 ರಿಂದ ಧಾರ್ಮಿಕ ವಿಧಿವಿಧಾನಗಳು ಆರಂಭ:

ರಾಮ ಮಂದಿರದ ಭೂಮಿ ಪೂಜೆಗೆ ಎರಡು ದಿನಗಳ ಮೊದಲು ಅಂದರೆ ಆಗಸ್ಟ್ 3 ರಂದು ಧಾರ್ಮಿಕ ಆಚರಣೆಗಳು ಪ್ರಾರಂಭವಾಗಲಿವೆ. ಈ ಐತಿಹಾಸಿಕ ಸುಸಂದರ್ಭದಲ್ಲಿ ರಾಮಾಯಣ ಪಠಣವೂ ನಡೆಯಲಿದೆ. ದೇವಾಲಯಗಳನ್ನು ಸಹ ಅಲಂಕರಿಸಲಾಗುತ್ತಿದೆ. ಭೂಮಿ ಪೂಜೆ ದಿನದಂದು ದೇವಾಲಯಗಳಲ್ಲಿ ವಿವಿಧ ದೇವರು ಮತ್ತು ದೇವತೆಗಳಿಗೆ ವಿಶೇಷ ಪೂಜೆಗಳು ನಡೆಯಲಿವೆ.

ಆರ್ಟಿಸ್ಟಿಕ್ ಗೇಟ್:

ಹೆದ್ದಾರಿಯಲ್ಲಿರುವ ಓವರ್‌ಬ್ರಿಡ್ಜ್‌ನ ಕಂಬಗಳನ್ನು ಕಲಾತ್ಮಕವಾಗಿ ಚಿತ್ರಿಸಲಾಗುತ್ತಿದೆ. ಅಂತೆಯೇ, ಎಲ್ಲಾ ದೇವಾಲಯಗಳಿಗೆ ಪ್ರವೇಶ ದ್ವಾರಗಳನ್ನು ಸಹ ಸುಂದರವಾಗಿ ಅಲಂಕರಿಸಲಾಗಿದೆ. ಅವಳಿ ಪವಿತ್ರ ನಗರಗಳಾದ ಅಯೋಧ್ಯೆ ಮತ್ತು ಫೈಜಾಬಾದ್‌ನಲ್ಲಿನ ಎಲ್ಲಾ ಮಾರ್ಗಗಳಿಗೆ ಭವ್ಯವಾದ ನೋಟವನ್ನು ನೀಡಲಾಗುತ್ತಿದೆ. ಎಲ್ಲರಿಗೂ ಹಬ್ಬದ ಅನುಭವವನ್ನು ನೀಡಲು ಎಲ್ಲಾ ಪ್ರಮುಖ ಹಂತಗಳಲ್ಲಿ ವಿವಿಧ ಸ್ವಾಗತ ಗೇಟ್‌ಗಳನ್ನು ಮಾಡಲಾಗುತ್ತಿದೆ.

ಭೂಮಿ ಪೂಜೆ ನೇರ ಪ್ರಸಾರಕ್ಕ ಸಿದ್ಧತೆ:

ಶ್ರೀ ಮಣಿ ರಾಮದಾಸ್ ಛಾವಣಿಯ ಉತ್ತರಾಧಿಕಾರಿ ಮತ್ತು ಶ್ರೀ ರಾಮ ಜನ್ಮಭೂಮಿ ನಾಯ್ಸ್ ಹಿರಿಯ ಸದಸ್ಯ ಕಮಲ್ ನಯನ್ ದಾಸ್ ಅವರು ರಾಮ್ ಮಂದಿರದ ಭೂಮಿ ಪೂಜೆಯ ತಯಾರಿ ಸಾಕಷ್ಟು ಭವ್ಯವಾಗಿದೆ ಎಂದು ಹೇಳಿದರು.

ಕೊರೊನಾ ಭೀತಿ ಹಿನ್ನೆಲೆ ಜನರಿಗೆ ಮನೆಯಿಂದಲೇ ರಾಮ ಮಂದಿರದ ಭೂಮಿ ಪೂಜೆ ವೀಕ್ಷಿಸಲು ಅನುಕೂಲವಾಗುವಂತೆ ನೇರ ಪ್ರಸಾರ ನೀಡಲು ಅಯೋಧ್ಯೆಯ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಎಲ್ಇಡಿ ಪರದೆಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details