ನವದೆಹಲಿ:ವಾಣಿಜ್ಯ ಹಾಗೂ ಡಿಜಿಟಲ್ ಆರ್ಥಿಕತೆಯ ಕುರಿತು ಜೂನ್ 8 ಮತ್ತು 9ರಂದು ನಡೆಯಲಿರುವ ಜಿ-20 ಶೃಂಗ ಸಭೆಯ ಭಾರತೀಯ ಪ್ರತಿನಿಧಿಗಳ ನಾಯಕತ್ವವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ವಹಿಸಿಕೊಳ್ಳಲಿದ್ದಾರೆ.
ಜಪಾನ್ನ ಸುಕುಬ ನಗರದಲ್ಲಿ ಈ ಶೃಂಗ ನಡೆಯಲಿದ್ದು, ಈ ವೇಳೆ ಜಾಗತಿಕ ಆರ್ಥಿಕತೆಯ ಪ್ರಸ್ತುತ ಸ್ಥಿತಿಗತಿ, ವಿಶ್ವ ವಾಣಿಜ್ಯ ಒಪ್ಪಂದದ (ಡಬ್ಲ್ಯುಟಿಒ) ವಿವಾದ ಹಾಗೂ ಡಿಜಿಟಲ್ ಆರ್ಥಿಕತೆಯ ಕುರಿತ ವಿಷಯಗಳು ಚರ್ಚೆಗೆ ಬರಲಿವೆ. ಈ ವೇಳೆ ಗೋಯಲ್ ಅವರು, ಭಾರತದ ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ ಹೂಡಿಕೆಯ ಬಗ್ಗೆ ಮಾತನಾಡಲಿದ್ದಾರೆ.